https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಫೆಬ್ರವರಿ 26ರಂದು ಅಂದ್ರೆ ನಾಳೆ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಮದುವೆಯ ಸಂಭ್ರಮದ ನಂತರ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದ್ದು, ಅಲ್ಲಿ ಇಡೀ ದಕ್ಷಿಣ ಭಾರತದ ತಾರಾಬಳಗವೇ ನೆರೆಯುವ ಸಾಧ್ಯತೆಯಿದೆ.
ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಿಂದಲೇ ತಮ್ಮ ವೃತ್ತಿ ಬದುಕಿನ ಪಯಣ ಆರಂಭಿಸಿದವರು. ಹೀಗಾಗಿ, ತಮ್ಮ ಮದುವೆಯ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ಆಪ್ತರನ್ನು ಮರೆತಿಲ್ಲ. ವಿಶೇಷವೆಂದರೆ, ಅವರು ಕೇವಲ 11 ಮಂದಿ ಗಣ್ಯರಿಗೆ ಮಾತ್ರ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಪಟ್ಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಮತ್ತು ರಾಕಿಂಗ್ ಸ್ಟಾರ್ ಯಶ್ ಇದ್ದಾರೆ.. ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ರಶ್ಮಿಕಾ ವಿಶೇಷ ಆಮಂತ್ರಣ ನೀಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ಆಶಿಕಾ ರಂಗನಾಥ್ ಕೂಡ ಅತಿಥಿಗಳ ಪಟ್ಟಿಯಲ್ಲಿದ್ದಾರೆ. ನಿರ್ದೇಶಕರಾದ ಎ. ಹರ್ಷ, ನಂದ ಕಿಶೋರ್ ಮತ್ತು ಸಿಂಪಲ್ ಸಿನಿ ಅವರಿಗೆ ಮಾತ್ರ ಈ ಅದೃಷ್ಟದ ಆಹ್ವಾನ ಸಿಕ್ಕಿದೆ.
ಕೇವಲ ಲಗ್ನ ಪತ್ರಿಕೆ ನೀಡುವುದಷ್ಟೇ ಅಲ್ಲದೆ, ರಶ್ಮಿಕಾ ಅವರು ಸ್ವತಃ ತಾವೇ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಮೆಸೇಜ್ ಮಾಡಿ ಮದುವೆಗೆ ಕರೆದಿದ್ದಾರೆ. ಸದ್ಯಕ್ಕೆ ಈ ‘ವಿರೋಷ್’ ಮದುವೆಯ ಫೋಟೋಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಕೆಟ್, ಮಗ್ ಗಲೀಜಾದ್ರೆ ಉಜ್ಜಿ ಉಜ್ಜಿ ಕೈ ನೋಯಿಸಕೊಳ್ಳಬೇಡಿ ಈ ರೀತಿ ಮಾಡಿ