https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಅಡುಗೆ ಮಾಡುವುದೆಂದರೆ ಒಂದು ರೀತಿಯ ಖುಷಿಯ ವಿಚಾರವೂ ಹೌದು, ಸಮಸ್ಯೆಯೂ ಹೌದು! ಯಾವ ಅಡುಗೆಗೆ ಯಾವ ಪದಾರ್ಥಗಳನ್ನು ಬಳಸಬೇಕು, ಎಲ್ಲಿಂದ ತರಬೇಕು ಯಾವುದು ಒಳ್ಳೆಯದು ಎಂಬಿತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ಆಧುನಿಕ ಜಾಹೀರಾತಿನ ಮಾಯೆಯಲ್ಲಿ ನಮ್ಮ ಪೂರ್ವಜರು ನೀಡಿದ ಈ ಆರೋಗ್ಯ ರಹಸ್ಯವನ್ನು ನಾವು ಮರೆಯುತ್ತಿದ್ದೇವೆ. ರುಚಿಕರ ಮತ್ತು ಆರೋಗ್ಯ ಪ್ರಯೋಜನಗಳನ್ನ ಒದಗಿಸುವ ಆ ಅಗ್ಗದ ಎಣ್ಣೆ ಯಾವುದು ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಆ ಎಣ್ಣೆ ಬೇರೆ ಯಾವುದೂ ಅಲ್ಲ ಕಡಲೆಕಾಯಿ ಎಣ್ಣೆ.
ಕಡಲೆಕಾಯಿ ಎಣ್ಣೆಯನ್ನು ನಮ್ಮ ದೇಶೀಯ ಅಡುಗೆಯ ‘ಆರೋಗ್ಯ ನಿಧಿ’ ಎಂದು ಕರೆಯಬಹುದು. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿದೇಶಿ ಎಣ್ಣೆಗಳು ಅಥವಾ ಪ್ಯಾಕೆಟ್ ಸಂಸ್ಕರಿಸಿದ ಎಣ್ಣೆಗಳಿಗಿಂತ ಹೆಚ್ಚು ಉತ್ತಮವಾಗಿದೆ. ಇದರ ದೊಡ್ಡ ಪ್ಲಸ್ ಪಾಯಿಂಟ್ ಇದರ ‘ಸ್ಮೋಕಿಂಗ್ ಪಾಯಿಂಟ್’. ಇದರರ್ಥ ಈ ಎಣ್ಣೆಯನ್ನು ಎಷ್ಟೇ ಬಿಸಿ ಮಾಡಿದರೂ ಅದು ವಿಷಕಾರಿಯಾಗುವುದಿಲ್ಲ. ಅದಕ್ಕಾಗಿಯೇ ಇದು ನಮ್ಮ ಭಕ್ಷ್ಯಗಳಲ್ಲಿ ಡೀಪ್ ಫ್ರೈ ಮತ್ತು ಸ್ಟಿರ್-ಫ್ರೈ ಮಾಡಲು ಸೂಕ್ತವಾಗಿದೆ.
ಹೃದಯವನ್ನು ರಕ್ಷಿಸುತ್ತದೆ. ಇದು ಏಕಾಪರ್ಯಾಪ್ತ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಹೃದಯ ಕಾಯಿಲೆಯ ಅಪಾಯವನ್ನ ಕಡಿಮೆ ಮಾಡುತ್ತದೆ.
ಈ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಅಕಾಲಿಕ ವಯಸ್ಸಾಗುವುದನ್ನ ತಡೆಯುತ್ತದೆ. ಮಧುಮೇಹ ನಿಯಂತ್ರಣ: ಕಡಲೆಕಾಯಿ ಎಣ್ಣೆಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ.