Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ವಿನ್ನರ್; ಯಾವ ಪಕ್ಷ?
ಪ್ರಮುಖಮನರಂಜನೆ

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ವಿನ್ನರ್; ಯಾವ ಪಕ್ಷ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಬಿಗ್ ಬಾಸ್ ವಿನ್ನರ್ , ನಟ ಹಾಗೂ ನಿರ್ದೇಶಕ ಅಖಿಲ್ ಮಾರಾರ್ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ. ಬಿಗ್ ಬಾಸ್ ಮಲೆಯಾಳಂ 5ನೇ ಆವೃತ್ತಿ ಗೆದ್ದ ಅಖಿಲ್ ಮಾರಾರ್, ಎನ್‌ಡಿಎ ಮಿತ್ರಪಕ್ಷವಾಗಿರುವ ಕೇರಳದ ಟ್ವೆಂಟಿ20 ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಟ್ವೆಂಟಿ20 ಪಕ್ಷದ ಚೀಫ್ ಕೋಆರ್ಡಿನೇಟರ್ ಸಾಬು ಎಂ. ಜೇಕಬ್ ಜೊತೆ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.
ಟ್ವೆಂಟಿ20 ಪಕ್ಷಕ್ಕೆ ಅನೇಕ ಪ್ರತಿಭಾವಂತರು ಸೇರುತ್ತಿದ್ದಾರೆ ಎಂದು ಸಾಬು ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಎನ್‌ಡಿಎ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದರು.
ಬಿಗ್ ಬಾಸ್ ವಿನ್ನರ್ ಅಖಿಲ್ ಮಾರಾರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಾನೊಬ್ಬ ಸ್ವತಂತ್ರ ಚಿಂತನೆಯುಳ್ಳ ವ್ಯಕ್ತಿ. ಕೇರಳದಲ್ಲಿ ಆಡಳಿತ ಬದಲಾಗಬೇಕು ಎಂಬುದು ನನ್ನ ನಿಲುವಾಗಿತ್ತು. ಇದೇ ಕಾರಣಕ್ಕೆ ನಾನು ಹಲವು ಬಾರಿ ಯುಡಿಎಫ್ ಪರವಾದ ನಿಲುವು ತಳೆದಿದ್ದೆ ಎಂದಿದ್ದಾರೆ. ದೂರದೃಷ್ಟಿ ಇರುವ ನಾಯಕರು ಮುಂದೆ ಬರಬೇಕು. ಟ್ವೆಂಟಿ20 ಅಂತಹ ನಿಲುವು ಹೊಂದಿರುವ ಪಕ್ಷ. ನಾನು ಕಾಂಗ್ರೆಸ್‌ನೊಳಗೆ ಇರಬೇಕೋ ಅಥವಾ ಹೊರಗೆ ಇರಬೇಕೋ ಎಂದು ಅವರೇ (ಕಾಂಗ್ರೆಸ್ ನಾಯಕರು) ಯೋಚಿಸಬೇಕಿತ್ತು. ಆದರೆ, ಹಾಗಾಗಲಿಲ್ಲ. ನಾನು ವಿ.ಡಿ. ಸತೀಶನ್ ಅವರನ್ನು ತೀವ್ರವಾಗಿ ಟೀಕಿಸಿದ್ದೇನೆ. ಆದರೂ, ನನಗೆ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯವಿದೆ. ನಾನು ಯುಡಿಎಫ್ ಜೊತೆ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ” ಎಂದು ಅವರು ತಿಳಿಸಿದರು. ‘ಕೇರಳ ಸ್ಟೋರಿ-2’ ಟ್ರೈಲರ್ ವಿವಾದದ ಬಗ್ಗೆ ಎನ್‌ಡಿಎ ನಾಯಕತ್ವವೇ ಪ್ರತಿಕ್ರಿಯೆ ನೀಡಬೇಕು ಎಂದೂ ಅಖಿಲ್ ಮಾರಾರ್ ಇದೇ ವೇಳೆ ಹೇಳಿದರು.
ಅಖಿಲ್ ಮಾರಾರ್ ಅವರು ಕೊಲ್ಲಂ ಜಿಲ್ಲೆಯ ಒಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಅವರು ಕೊಟ್ಟಾರಕ್ಕರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಟ್ವೆಂಟಿ20 ನಾಯಕರೊಂದಿಗೆ ಚರ್ಚೆ ನಡೆಸಿರುವುದಾಗಿ ಅಖಿಲ್ ಖಚಿತಪಡಿಸಿದ್ದರು.

ಅಖಿಲ್ ಮಾರಾರ್ ಅವರನ್ನು ಈ ಹಿಂದೆ ಕಾಂಗ್ರೆಸ್ ಬೆಂಬಲಿಗ ಎಂದೇ ಗುರುತಿಸಲಾಗುತ್ತಿತ್ತು. ಅವರು ಯೂತ್ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದ ಬಗ್ಗೆಯೂ ಈ ಹಿಂದೆ ವರದಿಗಳಾಗಿದ್ದವು. ಸಮೀಕ್ಷೆಗಳ ಪ್ರಕಾರ, ಕೊಲ್ಲಂನಲ್ಲಿ ಅಖಿಲ್ ಮಾರಾರ್ ಅವರಿಗಿರುವ ಪ್ರಭಾವವನ್ನು ಬಳಸಿಕೊಳ್ಳಲು ಬಿಜೆಪಿ ಕೂಡ ಅವರನ್ನು ಸಂಪರ್ಕಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ವಿ.ಡಿ. ಸತೀಶನ್ ಅವರಂತಹ ನಾಯಕರನ್ನು ಟೀಕಿಸಿದ ಬೆನ್ನಲ್ಲೇ ಅಖಿಲ್ ಇದೀಗ ಟ್ವೆಂಟಿ20 ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!

TAGGED:Bigg Boss winner enters politics; which party?
Share This Article
Facebook Twitter Copy Link Print
Previous Article ಹೆಂಡ್ತಿ ಹೆಸ್ರಲ್ಲಿ ಮನೆ ಇದ್ರೆ, ಒಂದ್ ರೂಪಾಯಿ ಟ್ಯಾಕ್ಸ್ ಕಟ್ಟಂಗಿಲ್ಲ!
Next Article ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಅರೆಸ್ಟ್

Popular Posts

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read

You Might Also Like

ದೇಶಪ್ರಮುಖವೈರಲ್

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read
ಪ್ರಮುಖದೇಶಮನರಂಜನೆ

Team India Records in cricket ಟೀಮ್ ಇಂಡಿಯಾದ ವಿಶ್ವದಾಖಲೆ ಇನ್ನಷ್ಟು ವಿಶೇಷ

2 Min Read
ದೇಶಕರ್ನಾಟಕಪ್ರಮುಖ

New Rules On August 1 ಆಗಸ್ಟ್ 1ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?