https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಪ್ರಮೋದ್ ಶೆಟ್ಟಿ ಅವರಿಗೆ ಪೊಲೀಸ್ ಪಾತ್ರಗಳು ಹೆಚ್ಚಾಗಿ ಇರುತ್ತವೆ. ಶೇಷ 2016 ಸಿನಿಮಾದಲ್ಲಿ ಕೂಡ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 6ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.
ಪೊಲೀಸ್ ಇಲಾಖೆಯ ಕಥೆ ಹೊಂದಿರುವ ‘ಶೇಷ 2016’ ಸಿನಿಮಾಗೆ ಪ್ರದೀಪ್ ಅರಸೀಕೆರೆ ಅವರ ನಿರ್ದೇಶನವಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳಿಗೆ ಬೇಡಿಕೆ ಬಂದಿದೆ ಎಂಬುದು ವಿಶೇಷ. ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿದ್ದು, ಇನ್ನುಳಿದ ಭಾಷೆಗಳಿಗೆ ಡಬ್ ಆಗಲಿದೆ.
ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಜಾನ್ ಕೈಪ್ಪಲ್ಲಿ, ಸಿದ್ಲಿಂಗು ಶ್ರೀಧರ್, ದೇವರಾಜ್, ಸಾಯಿ ಭೈರವ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ಎಸ್. ಆನಂದ್ ಕುಮಾರ್ ಅವರ ಛಾಯಾಗ್ರಹಣವಿದೆ.