newsics.com
ಬಾರ್ಮೇರ್(ರಾಜಸ್ಥಾನ): ಎರಡು ಮಕ್ಕಳ ತಂದೆ 44 ವರ್ಷದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ವ್ಯಕ್ತಿಯ ಬೆರಳುಗಳನ್ನು ಕತ್ತರಿಸಲಾಗಿದೆ. ನಂತರ ಮೂಳೆಗಳನ್ನು ಮುರಿದು, ಕಣ್ಣುಗಳನ್ನು ಕೀಳಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ದುಷ್ಕರ್ಮಿಗಳು ವ್ಯಕ್ತಿಯ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ವಿಕೃತಿ ಮರೆದಿದ್ದಾರೆ.
ಮೃತ ವ್ಯಕ್ತಿ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದ ಮಹಿಳೆಯ ಸಂಬಂಧಿಕರು ಕೊಲೆ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಬಿರಂಪುರ ಗ್ರಾಮದ ನಿವಾಸಿ ಇಮಾಮ್ ಖಾನ್ ಎಂದು ಗುರುತಿಸಲಾಗಿದೆ. ಇಮಾಮ್ ಖಾನ್ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಅದೇ ಗ್ರಾಮದ ಲಾಲಿ ಹೆಸರಿನ ಜತೆ ಅಕ್ರಮ ಸಂಬಂಧ ಹೊಂದಿದ್ದ.
ಲಾಲಿ ಗಂಡ ಮೃತನಾಗಿದ್ದು, ಅತ್ತೆ-ಮಾವನ ಜತೆಯಲ್ಲಿಯೇ ವಾಸವಾಗಿದ್ದಳು. ಸೊಸೆ ಲಾಲಿ ಅಕ್ರಮ ಸಂಬಂಧ ಹೊಂದಿರುವ ವಿಷಯ ಕುಟುಂಬಸ್ಥರಿಗೆ ಗೊತ್ತಾಗಿತ್ತು. ಹಲವು ಬಾರಿ ಇಮಾಮ್ ಖಾನ್ ಜತೆ ಮಾತನಾಡಿ ತಮ್ಮ ಸೊಸೆಯಿಂದ ದೂರ ಇರುವಂತೆ ಹೇಳಿದ್ದರು. ಹಾಗೆ ಲಾಲಿಗೂ ಎಚ್ಚರಿಕೆ ನೀಡಿದ್ದರು.
ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರೂ ಇಮಾಮ್ ಖಾನ್ ಮತ್ತು ಲಾಲಿ ನಡುವಿನ ಸಂಬಂಧ ಮುಂದುವರಿದಿತ್ತು. ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ಆದರೂ ಲಾಲಿಯನ್ನು ಭೇಟಿಯಾಗಲು ಇಮಾಮ್ ಬಂದಿದ್ದ. ಈ ವಿಷಯ ಲಾಲಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಕುಟುಂಬದ ನಾಲ್ವರು ಮನೆ ಬಾಗಿಲು ಮುರಿದು ಇಮಾಮ್ ಮತ್ತು ಲಾಲಿಯಿದ್ದ ಕೋಣೆಗೆ ನುಗ್ಗಿದ್ದಾರೆ.
ಬಾಗಿಲು ಮುರಿದು ಒಳಗೆ ನುಗ್ಗಿದಾಗ ಇಮಾಮ್ ಮತ್ತು ಲಾಲಿ ಇಬ್ಬರು ಸಲುಗೆಯಿಂದಿರುವುದು ಕಂಡುಬಂದಿದೆ. ಇಬ್ಬರ ಅನಾಚಾರ ಕಂಡು ಕೋಪಗೊಂಡ ಲಾಲಿ ಕುಟುಂಬಸ್ಥರು, ಇಮಾಮ್ ಖಾನ್ ಬಾಯಿಗೆ ಬಟ್ಟೆ ತುರುಕಿ ಕಬ್ಬಿಣದ ರಾಡ್ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇಮಾಮ್ ಕೈಯಲ್ಲಿನ ಎಲ್ಲಾ ಬೆರಳುಗಳನ್ನು ಕತ್ತರಿಸಿದ್ದಾರೆ. ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದರಿಂದ ಮೂಳೆಗಳು ಸಹ ಮುರಿದಿವೆ. ನಂತರ ಕಣ್ಣುಗಳನ್ನು ಕಿತ್ತು ಹಾಕಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇದರಿಂದ ಇಮಾಮ್ ಖಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇಮಾಮ್ ಖಾನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಮಾಮ್ ಖಾನ್ ಕೊಲೆಯಿಂದಾಗಿ ಗ್ರಾಮದಲ್ಲಿ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…