newsics.com
ಪ್ಯಾರಿಸ್: ನೀರಜ್ ಚೋಪ್ರಾ ಅವರು ಶುಕ್ರವಾರ(ಆ.9) ಮುಂಜಾನೆ ಪ್ಯಾರಿಸ್ ಒಲಿಂಪಿಕ್ಸ್ 2024 ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 89.45 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದುಕೊಂಡರು.
ಈ ಮೂಲಕ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟರು. ಪುರುಷರ ಜಾವೆಲಿನ್ ಥ್ರೋ ಫೈನಲ್, ಒಲಿಂಪಿಕ್ಸ್ 2024ರಲ್ಲಿ ನೀರಜ್ ಚೋಪ್ರಾ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ 89.45 ಮೀ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಗೆದ್ದರು, ಪಾಕಿಸ್ತಾನದ ಅರ್ಷದ್ ನದೀಮ್ ಉತ್ತಮ ಪ್ರದರ್ಶನ ನೀಡಿದರು. ಅವರು ಹೊಸ ಒಲಿಂಪಿಕ್ ದಾಖಲೆಯ 92.97 ಮೀಟರ್ ಮಾರ್ಕ್ ಅನ್ನು ನಿರ್ಮಿಸಿ ಚಿನ್ನ ಪಡೆದರು.
ಈ ಮೂಲಕ ಅವರು ಈಗ ಪಾಕಿಸ್ತಾನದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಾರೆ.
ಅರ್ಷದ್ ನದೀಮ್ ಅವರು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್‌ಸೆನ್ ಅವರು ಸ್ಥಾಪಿಸಿದ 90.57 ರ ಹಿಂದಿನ ಒಲಿಂಪಿಕ್ ದಾಖಲೆಯನ್ನು ಮುರಿದರು.
ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ (88.54 ಮೀ) ಕಂಚು ಪಡೆದರು.

ಮೂರು ವರ್ಷಗಳ ಹಿಂದೆ ಟೋಕಿಯೊ ಸಮ್ಮರ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್, ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿದರು.
ಈ ಮೂಲಕ ಒಲಿಂಪಿಕ್ ಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು. ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಒಟ್ಟಾರೆ ಐದನೇ ಪದಕ ಇದಾಗಿದೆ. ಅಲ್ಲದೇ ಇದು ಮೊದಲ ಬೆಳ್ಳಿಯಾಗಿದ್ದು, ಉಳಿದ ನಾಲ್ಕು ಕಂಚಿನ ಪದಕಗಳಾಗಿವೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಇಲ್ಲಿಯೂ ಅದೇ ಸಾಧನೆ ಮಾಡುವ ಆತ್ಮವಿಶ್ವಾಸದಲ್ಲಿದ್ದರು. ಆದರೆ ಗುರುವಾರ ರಾತ್ರಿ ಅವರಿಗೆ ಲಯ ಕೈಕೊಟ್ಟಿತು. ಆರು ಅವಕಾಶಗಳಲ್ಲಿ ಅವರು ಐದರಲ್ಲಿ ಫೌಲ್ ಮಾಡಿದರು. ಒಂದರಲ್ಲಿ ಮಾತ್ರ 89.45 ಮೀಟರ್ಸ್ ದೂರ ಜಾವೆಲಿನ್ ಥೋ ಮಾಡಿದರು.
ಆದರೆ, ನೀರಜ್ ಅವರ ‘ಸ್ನೇಹಿತ’ ನದೀಂ ಅವರಿಗೆ ಅದೃಷ್ಟ ಜತೆಗೂಡಿತು. 92.97 ಮೀ. ದೂರ ಎಸೆದು ಚಿನ್ನದ ಪದಕ ಜಯಿಸಿದರು. ಇದು ಒಲಿಂಪಿಕ್ ಕೂಟ ದಾಖಲೆಯೂ ಆಗಿದೆ. ಪಾಕಿಸ್ತಾನಕ್ಕೆ ಇದು ಮೊದಲ ಒಲಿಂಪಿಕ್ ಚಿನ್ನದ ಪದಕವಾಗಿದೆ.
ಗ್ರೆನೆಡಾದ ಆ್ಯಂಡರ್ಸನ್ ಪೀಟರ್ 88.54 ಮೀಟರ್ಸ್ ದೂರ ಥೋ ಮಾಡಿ ಕಂಚು ಗಳಿಸಿದರು.
ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…