Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಕ್ರಮ ಸಂಬಂಧ: ವ್ಯಕ್ತಿಯ ಬೆರಳು‌ಗಳನ್ನು ಕಟ್ ಮಾಡಿದ್ರು, ಮೂಳೆ ಮುರಿದರು, ಕಣ್ಣು ಕಿತ್ತರು, ಮರ್ಮಾಂಗ ಕತ್ತರಿಸಿ ಕೊಂದರು…
ದೇಶ

ಅಕ್ರಮ ಸಂಬಂಧ: ವ್ಯಕ್ತಿಯ ಬೆರಳು‌ಗಳನ್ನು ಕಟ್ ಮಾಡಿದ್ರು, ಮೂಳೆ ಮುರಿದರು, ಕಣ್ಣು ಕಿತ್ತರು, ಮರ್ಮಾಂಗ ಕತ್ತರಿಸಿ ಕೊಂದರು…

Share
2 Min Read
SHARE

newsics.com
ಬಾರ್‌ಮೇರ್(ರಾಜಸ್ಥಾನ): ಎರಡು ಮಕ್ಕಳ ತಂದೆ 44 ವರ್ಷದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ವ್ಯಕ್ತಿಯ ಬೆರಳುಗಳನ್ನು ಕತ್ತರಿಸಲಾಗಿದೆ. ನಂತರ ಮೂಳೆಗಳನ್ನು ಮುರಿದು, ಕಣ್ಣುಗಳನ್ನು ಕೀಳಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ದುಷ್ಕರ್ಮಿಗಳು ವ್ಯಕ್ತಿಯ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ವಿಕೃತಿ ಮರೆದಿದ್ದಾರೆ.

ಮೃತ ವ್ಯಕ್ತಿ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದ ಮಹಿಳೆಯ ಸಂಬಂಧಿಕರು ಕೊಲೆ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಬಿರಂಪುರ ಗ್ರಾಮದ ನಿವಾಸಿ ಇಮಾಮ್ ಖಾನ್ ಎಂದು ಗುರುತಿಸಲಾಗಿದೆ. ಇಮಾಮ್ ಖಾನ್ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಅದೇ ಗ್ರಾಮದ ಲಾಲಿ ಹೆಸರಿನ ಜತೆ ಅಕ್ರಮ ಸಂಬಂಧ ಹೊಂದಿದ್ದ.

ಲಾಲಿ ಗಂಡ ಮೃತನಾಗಿದ್ದು, ಅತ್ತೆ-ಮಾವನ ಜತೆಯಲ್ಲಿಯೇ ವಾಸವಾಗಿದ್ದಳು. ಸೊಸೆ ಲಾಲಿ ಅಕ್ರಮ ಸಂಬಂಧ ಹೊಂದಿರುವ ವಿಷಯ ಕುಟುಂಬಸ್ಥರಿಗೆ ಗೊತ್ತಾಗಿತ್ತು. ಹಲವು ಬಾರಿ ಇಮಾಮ್ ಖಾನ್ ಜತೆ ಮಾತನಾಡಿ ತಮ್ಮ ಸೊಸೆಯಿಂದ ದೂರ ಇರುವಂತೆ ಹೇಳಿದ್ದರು. ಹಾಗೆ ಲಾಲಿಗೂ ಎಚ್ಚರಿಕೆ ನೀಡಿದ್ದರು.

ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರೂ ಇಮಾಮ್ ಖಾನ್ ಮತ್ತು ಲಾಲಿ ನಡುವಿನ ಸಂಬಂಧ ಮುಂದುವರಿದಿತ್ತು. ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಹಲವು ಬಾರಿ ಜಗಳ ಸಹ ನಡೆದಿತ್ತು. ಆದರೂ ಲಾಲಿಯನ್ನು ಭೇಟಿಯಾಗಲು ಇಮಾಮ್ ಬಂದಿದ್ದ. ಈ ವಿಷಯ ಲಾಲಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಕುಟುಂಬದ ನಾಲ್ವರು ಮನೆ ಬಾಗಿಲು ಮುರಿದು ಇಮಾಮ್ ಮತ್ತು ಲಾಲಿಯಿದ್ದ ಕೋಣೆಗೆ ನುಗ್ಗಿದ್ದಾರೆ.

ಬಾಗಿಲು ಮುರಿದು ಒಳಗೆ ನುಗ್ಗಿದಾಗ ಇಮಾಮ್ ಮತ್ತು ಲಾಲಿ ಇಬ್ಬರು ಸಲುಗೆಯಿಂದಿರುವುದು ಕಂಡುಬಂದಿದೆ. ಇಬ್ಬರ ಅನಾಚಾರ ಕಂಡು ಕೋಪಗೊಂಡ ಲಾಲಿ ಕುಟುಂಬಸ್ಥರು, ಇಮಾಮ್ ಖಾನ್ ಬಾಯಿಗೆ ಬಟ್ಟೆ ತುರುಕಿ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಇಮಾಮ್ ಕೈಯಲ್ಲಿನ ಎಲ್ಲಾ ಬೆರಳುಗಳನ್ನು ಕತ್ತರಿಸಿದ್ದಾರೆ. ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರಿಂದ ಮೂಳೆಗಳು ಸಹ ಮುರಿದಿವೆ. ನಂತರ ಕಣ್ಣುಗಳನ್ನು ಕಿತ್ತು ಹಾಕಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇದರಿಂದ ಇಮಾಮ್ ಖಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇಮಾಮ್ ಖಾನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಮಾಮ್ ಖಾನ್ ಕೊಲೆಯಿಂದಾಗಿ ಗ್ರಾಮದಲ್ಲಿ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮದುವೆ ದಿನವೇ ದಂಪತಿ ಹೊಡೆದಾಟ: ಪತ್ನಿ ಜತೆ ಪತಿಯೂ ಸಾವು

ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…

TAGGED:Illicit Affair: The gruesome killed a man
Share This Article
Facebook Twitter Copy Link Print
Previous Article ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಇನ್ನಿಲ್ಲ
Next Article Paris Olympics 2024 ಜಾವೆಲಿನ್ ಥ್ರೋ: ‘ಚಿನ್ನದ ಹುಡುಗ’ ನೀರಜ್‌ ಚೋಪ್ರಾಗೆ ಬೆಳ್ಳಿ, ಭಾರತಕ್ಕೆ ಮೊದಲ ‘ರಜತ’ ಸಂಭ್ರಮ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?