Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರಲ್ಲಿ ಪಿಕ್‌ಅಪ್‌ ಕಿರಿಕ್: ಆಂಧ್ರದಲ್ಲಿ ಬಸ್ ಡ್ರೈವರ್ ಹಲ್ಲೆ ಮಾಡಿಸಿದ ಮಹಿಳೆ!
ಕರ್ನಾಟಕದೇಶಪ್ರಮುಖ

ಬೆಂಗಳೂರಲ್ಲಿ ಪಿಕ್‌ಅಪ್‌ ಕಿರಿಕ್: ಆಂಧ್ರದಲ್ಲಿ ಬಸ್ ಡ್ರೈವರ್ ಹಲ್ಲೆ ಮಾಡಿಸಿದ ಮಹಿಳೆ!

Share
1 Min Read
SHARE

https://youtube.com/shorts/Z1cy8EQaCVE?si=-_cWMt02yPVoM0xd

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು : ಬೆಂಗಳೂರಿನಲ್ಲಿ ಬಸ್ ಪಿಕ್‌ಅಪ್‌ ವಿಚಾರವಾಗಿ ನಡೆದ ಸಣ್ಣ ವಾಗ್ವಾದವೊಂದು ಆಂಧ್ರಪ್ರದೇಶದಲ್ಲಿ ಹಲ್ಲೆಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ತಿರುಪತಿಗೆ ತೆರಳಲು ಖಾಸಗಿ ಬಸ್ ಬುಕ್ ಮಾಡಿದ್ದ ಆಂಧ್ರ ಮೂಲದ ಮಹಿಳೆಯೊಬ್ಬರು ಪಿಕ್‌ಅಪ್ ಪಾಯಿಂಟ್‌ಗೆ ತಡವಾಗಿ ಬಂದಿದ್ದರು.

ಮಧ್ಯಾಹ್ನ 12 ಗಂಟೆಗೆ ಬಸ್ ಬರಬೇಕಿತ್ತು, ಆದರೆ ಮಹಿಳೆ ತಡವಾಗಿ ಬಂದು ತಮಗಾಗಿ ಕಾಯುವಂತೆ ಚಾಲಕನಿಗೆ ಫೋನ್‌ನಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಾಲಕ, ‘ಟ್ರಾಫಿಕ್ ಜಾಮ್ ಆಗುತ್ತದೆ ಮತ್ತು ಪಿಕ್‌ಅಪ್ ಸಮಯ ಈಗಾಗಲೇ ಮುಗಿದಿದೆ. ಬಸ್ ಕಾಯಲು ಸಾಧ್ಯವಿಲ್ಲ, ನೀವು ಮುಂದಿನ ಸ್ಟಾಪ್ ಆದ ಮೆಜೆಸ್ಟಿಕ್‌ಗೆ ಬನ್ನಿ, ಅಲ್ಲಿ ಹತ್ತಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದರು. ಈ ವಿಚಾರವಾಗಿ ಫೋನ್‌ನಲ್ಲಿಯೇ ಚಾಲಕ ಹಾಗೂ ಮಹಿಳೆ ನಡುವೆ ಜೋರು ವಾಗ್ವಾದ ನಡೆದಿತ್ತು.

ಬಳಿಕ ಆ ಮಹಿಳೆ ಮೆಜೆಸ್ಟಿಕ್ ಸ್ಟಾಪ್‌ಗೆ ಬಂದು ಬಸ್ ಹತ್ತಿದ್ದರು. ಪ್ರಯಾಣದುದ್ದಕ್ಕೂ ಆಕೆ ಚಾಲಕನೊಂದಿಗೆ ಯಾವುದೇ ಮಾತನಾಡದೆ ಮೌನವಾಗಿದ್ದರು.

ಆದರೆ, ಬಸ್ ಆಂಧ್ರಪ್ರದೇಶದ ಚಿತ್ತಾಪುರ ತಲುಪುತ್ತಿದ್ದಂತೆ ಆಕೆ ತನ್ನ ಬಣ್ಣ ಬದಲಿಸಿದ್ದಾರೆ. ತಡರಾತ್ರಿ ಬಸ್ ಚಿತ್ತಾಪುರ ತಲುಪಿದಾಗ, ಆಕೆ ಮೊದಲೇ ಸಂಚು ರೂಪಿಸಿ ಫೋನ್ ಮಾಡಿ 8 ಮಂದಿ ಪುಂಡರನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಬಸ್ ನಿಲ್ಲುತ್ತಿದ್ದಂತೆ ಮಹಿಳೆ ಸೂಚಿಸಿದ ಎಂಟು ಮಂದಿ ಗೂಂಡಾಗಳು ಬಸ್ ಒಳಗೆ ನುಗ್ಗಿ, ಸ್ಟೀರಿಂಗ್ ಸೀಟಿನಲ್ಲಿದ್ದ ಚಾಲಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಆಂಧ್ರದ ಯಾವುದೋ ಸಂಘಟನೆಗೆ ಸೇರಿದವರು ಎನ್ನಲಾದ ಈ ಯುವಕರು ಚಾಲಕನನ್ನು ಮನಬಂದಂತೆ ಥಳಿಸಿದ್ದಾರೆ.

ಚಾಲಕನ ಮೇಲೆ ನಡೆದ ಹಲ್ಲೆಯ ಸಂಪೂರ್ಣ ದೃಶ್ಯಗಳು ಬಸ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.ಘಟನೆ ನಡೆದ ಕೂಡಲೇ ಚಾಲಕ ಸ್ಥಳೀಯ ಆಂಧ್ರಪ್ರದೇಶದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ. ಆದರೆ, ಅಲ್ಲಿನ ಪೊಲೀಸರು ಸ್ಥಳೀಯರ ಪ್ರಭಾವಕ್ಕೆ ಮಣಿದು ಸರಿಯಾಗಿ ಸ್ಪಂದಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

https://www.newsics.com/2026/02/13/malaysian-tech-entrepreneur-buys-ai-com-domain-for-just-100/

TAGGED:Pickup accident in Bengaluru: Woman assaulted by bus driver in Andhra Pradesh!
Share This Article
Facebook Twitter Copy Link Print
Previous Article 300 ರೂ.ಗೆ ಖರೀದಿಸಿದ್ದ AI.com ಡೊಮೇನ್ ಈಗ 634 ಕೋಟಿ ರೂ.ಗೆ ಸೇಲ್!
Next Article ದೆಹಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?