https://youtube.com/shorts/PRG7YTSZHd8?si=XPgvM4rV-P2TfkHJ
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಮಗನೇ ತನ್ನನ್ನು ಹೆತ್ತು ಹೊತ್ತ ತಂದೆ, ತಾಯಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್‌ಎಎಲ್‌ನ ವಿಜ್ಞಾನ ನಗರದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
60 ವರ್ಷದ ನವೀನ್ ಚಂದ್ರ ಭಟ್ ಹಾಗೂ ಅವರ ಪತ್ನಿ, 55 ವರ್ಷದ ಶ್ಯಾಮಲಾ ಭಟ್ ಎಂಬುವರೇ ಮಗನಿಂದ ಹತ್ಯೆಯಾದ ತಂದೆ, ತಾಯಿ. 33 ವರ್ಷದ ಮಗ ರೋಹನ್ ಭಟ್ ಎಂಬಾತನೇ ತಂದೆ, ತಾಯಿಯನ್ನು ಹತ್ಯೆ ಮಾಡಿದ್ದಾನೆ.
ಚಾಕುವಿನಿಂದ ತಂದೆ ತಾಯಿ ಇಬ್ಬರಿಗೂ ಇರಿದ ಮಗ, ಬಳಿಕ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಳಿಕ ಆಸ್ಪತ್ರೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಲೆಯಾದ ನವೀನ್ ಚಂದ್ರ ಭಟ್ ನಿವೃತ್ತ ನೇವಿ ಕ್ಯಾಪ್ಟನ್ ಆಗಿದ್ದರು. ಅವರ ಪತ್ನಿ ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಅವರಿಗೆ ಪುತ್ರ ರೋಷನ್ ಭಟ್ ಅಲ್ಲದೇ, ಮಗಳೂ ಇದ್ದು ಅವರು ಸದ್ಯ ಅಮೆರಿಕದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎನ್ನಲಾಗಿದ್ದು, ಸದ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.
https://www.newsics.com/2026/02/11/good-news-for-team-india-before-the-2nd-match/