https://youtube.com/shorts/s_4DpSB4DuI?si=vT3jI23kSNraX06b
Subscribe ನ್ಯೂಸಿಕ್ಸ್ ಕನ್ನಡ
newsics.com
ದಕ್ಷಿಣ ಕನ್ನಡ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಸ್ಟಿ ಪ್ರದೇಶದ ಹಿಂದೂ ಮೆಡಂಗಿ ಜೋಶಿ ಸಮಾಜದ ಭಕ್ತರು ತಮ್ಮ ಸಂಪ್ರದಾಯದಂತೆ ಕಾಂಕ್ರೇಜ್ ತಳಿಯ ದೊಡ್ಡ ಕೊಂಬುಗಳ ಹೋರಿಗಳೊಂದಿಗೆ ಪ್ರತಿ ವರ್ಷದಂತೆ ಈ ಬಾರಿ ಅವರು ತಮ್ಮ ಊರಿನಿಂದ ಧರ್ಮಸ್ಥಳ, ತಿರುಪತಿ, ಪುರಿ ಜಗನ್ನಾಥ ಕ್ಷೇತ್ರದ ದರ್ಶನಕ್ಕಾಗಿ ಹೊರಟಿದ್ದಾರೆ.
ಅವರ ಜತೆ ಮೂರು ಬೃಹತ್ ಗಾತ್ರದ ಹೋರಿಗಳಿದ್ದು, ಸುಮಾರು 13 ಮಂದಿ ಜತೆಗಿದ್ದಾರೆ. ಹೋರಿಗಳನ್ನು ಮೂರು ಗೂಡ್ಸ್ ವಾಹನಗಳಲ್ಲಿ ಸಾಗಿಸುತ್ತಿದ್ದು, ಒಂದು ವಾಹನದಲ್ಲಿ ಅವರ ತಂಡ ಸಾಗುತ್ತದೆ. ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಸಾಗುತ್ತಿದ್ದು, ಈ ಸಂದರ್ಭ ಹೋರಿಗಳು ಜನಾಕರ್ಷಣೆ ಪಡೆಯುತ್ತಿವೆ.
ಕಳೆದೆರಡು ದಿನಗಳಿಂದ ಈ ಯಾತ್ರಾ ತಂಡ ಬಿ.ಸಿ. ರೋಡಿನ ತಲಪಾಡಿಯಲ್ಲಿ ಬೀಡು ಬಿಟ್ಟಿದ್ದು, ಅವರ ಒಂದು ಹೋರಿಗೆ ಕೊಂಚ ಆರೋಗ್ಯ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಒಂದೆರಡು ದಿನ ಹೆಚ್ಚೇ ವಿಶ್ರಾಂತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಜನ ಅಪರೂಪದ ಹೋರಿಗಳನ್ನು ಕಂಡು ಆಹಾರ, ಕಾಣಿಕೆ ನೀಡುತ್ತಾರೆ. ಅದನ್ನು ಸ್ವೀಕರಿಸಿಕೊಂಡು ನಮ್ಮ ಪ್ರಯಾಣ ಬೆಳೆಸುತ್ತೇವೆ. ಪುಣ್ಯಕ್ಷೇತ್ರಗಳ ಸಂದರ್ಶನದ ಸಂದರ್ಭದಲ್ಲಿ ಮಹಾ ನಂದಿಗಳಿಗೆ ಅಲ್ಲಿನ ಜಲವನ್ನು ಅಭಿಷೇಕ ಮಾಡುವುದು ನಮ್ಮ ಸಂಪ್ರದಾಯವಾಗಿದೆ. ಪ್ರಸ್ತುತ ಧರ್ಮಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಹೋರಿಯನ್ನು ಧಾರ್ಮಿಕ ಹಿನ್ನೆಲೆಯಂತೆ ಸಂಪೂರ್ಣ ಅಲಂಕಾರ ಮಾಡುತ್ತೇವೆ. ಜತೆಗೆ ನಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ದೇವರ ದರ್ಶನ ಪಡೆಯುತ್ತೇವೆ ಎಂದು ಹೇಳಿದ್ದಾರೆ.