https://youtube.com/shorts/fUqc-HD4bis?si=yi6YnXq787fc3mzH
Subscribe ನ್ಯೂಸಿಕ್ಸ್ ಕನ್ನಡ
newsics.com
ನಟ ಸತ್ಯರಾಜ್ ತಮಿಳು ನಟ. ‘ಬಾಹುಬಲಿ’ ಚಿತ್ರದ ಕಟ್ಟಪ್ಪ ಆಗಿ ಮಿಂಚಿದವರು. ಹಲವು ವರ್ಷಗಳ ನಂತರ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿ ಸಖತ್ ಬ್ಯುಸಿಯಾದವರು.
ಮೊದಲಿಗೆ ನಾಯಕ ನಟನಾಗಿ ಮಿಂಚಿದ್ದರು. ಕಮಲ್ ಹಾಸನ್ , ರಜನಿಕಾಂತ್ ಮುಂತಾದ ನಟರು ನಾಯಕರಾಗಿ ತಮ್ಮ ಪಯಣ ಮುಂದುವರಿಸುತ್ತಿದ್ದಾರೆ. ಆದರೆ, ಸತ್ಯರಾಜ್ ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿರಸಿಕರಿಗೆ ಮನರಂಜನಾ ಊಟ ಉಣಬಡಿಸುವ ಸತ್ಯರಾಜ್ ಜೀವನದ ಕಥೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ.
ಸತ್ಯರಾಜ್, ಮಹೇಶ್ವರಿ ಎಂಬುವರೊಟ್ಟಿಗೆ ಬಹಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಸತ್ಯರಾಜ್ ಅವರ ಪತ್ನಿ ಮಹೇಶ್ವರಿ ಕಳೆದ ಆರು ವರ್ಷಗಳಿಂದಲೂ ಕೋಮಾದಲ್ಲಿದ್ದು, ಜೀವಂತ ಶವವಾಗಿದ್ದಾರೆ. ಮಹೇಶ್ವರಿ ಅವರು 2020ರ ಸುಮಾರಿಗೆ ಬ್ರೇನ್ ಹೆಮರೇಜ್ಗೆ ತುತ್ತಾಗಿದ್ದು, ಆಗಿನಿಂದಲೂ ಕೋಮಾದಲ್ಲಿಯೇ ಇದ್ದಾರೆ. ವೈದ್ಯರು ಸಹ ಮಹೇಶ್ವರಿ ಅವರ ಬಗ್ಗೆ ಆಗಲೇ ಕೈಚೆಲ್ಲಿದ್ದರು. ಇನ್ನು ಮಹೇರ್ಶವರಿ ಅವರ ರಿಕವರಿ ಅಸಾಧ್ಯ ಎಂದು ಹೇಳಿಬಿಟ್ಟಿದ್ದರು. ಆದರೆ ಸತ್ಯರಾಜ್, ನಂಬಿಕೆ ಕಳೆದುಕೊಂಡಿಲ್ಲ. ಈಗಲೂ ಸಹ ಅವರನ್ನು ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿದೆ.
ನಟ ಸತ್ಯರಾಜ್ ಪುತ್ರಿ ದಿವ್ಯಾ ನ್ಯೂಟ್ರಿಷನಿಸ್ಟ್ ಆಗಿದ್ದಾರೆ. ಸದ್ಯ ತಮ್ಮ ತಾಯಿ ಮಹೇಶ್ವರಿ ಬಗ್ಗೆ ದಿವ್ಯಾ ಹಂಚಿಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಈ ಪೋಸ್ಟ್ ಸಿಂಗಲ್ ಪೇರೆಂಟ್ ಇದ್ದವರಿಗೆ. ನನ್ನ ಅಮ್ಮ 4 ವರ್ಷಗಳಿಂದ ಕೋಮಾ ಹೋಗಿದ್ದಾರೆ. ಅವಳಿಗೆ PEG ಟ್ಯೂಬ್ ಮೂಲಕ ಆಹಾರವನ್ನು ನೀಡುತ್ತೇವೆ. ನಮ್ಮ ಮನಸ್ಸು ಛಿದ್ರವಾಗಿದೆ, ಆದರೆ ನಾವು ಭರವಸೆ ಮತ್ತು ಸಕಾರಾತ್ಮಕವಾಗಿ ಆಕೆಯ ವೈದ್ಯಕೀಯ ಪ್ರಗತಿಗಾಗಿ ಕಾಯುತ್ತೇವೆ. ನಾವು ಅಮ್ಮನನ್ನು ಮರಳಿ ಪಡೆಯುತ್ತೇವೆ ಎಂದು ಭಾವಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಮಹೇಶ್ವರಿ ಅವರು 2018 ರಲ್ಲಿ ಸಿನಿಮಾ ನಿರ್ಮಾಪಕಿ ಆಗಿ ಎಂಟ್ರಿ ಕೊಟ್ಟಿದ್ದರು, ಎರಡು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದರು. ಆದರೆ ಅನಾರೋಗ್ಯದಿಂದ ಎಲ್ಲವೂ ನಿಂತು ಹೋಯ್ತು.