https://youtube.com/shorts/kv9in5qxZnE?si=xMEQPbw5L2rTAx6o
Subscribe ನ್ಯೂಸಿಕ್ಸ್ ಕನ್ನಡ
newsics.com
ಸ್ವಾಮೀಜಿ ದೇವಸ್ಥಾನದ ಆವರಣದಲ್ಲಿದ್ದ ಹೂವಿನ ತೋಟದೊಳಗೆ ಗಾಂಜಾ ಗಿಡಗಳನ್ನು ಬೆಳೆಸಿದ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಾಮ್ ಗ್ರಾಮದಲ್ಲಿ ನಡೆದಿದೆ.
ಔಟಿ ನಾಗಯ್ಯ (48) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಗ್ರಾಮದ ದೇವಸ್ಥಾನವೊಂದರಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದನು.
ಅಷ್ಟೇ ಅಲ್ಲದೆ, ಊರಿನಲ್ಲಿ ತನ್ನನ್ನು ತಾನು ಆಧ್ಯಾತ್ಮಿಕ ಗುರು ಎಂದು ಬಿಂಬಿಸಿಕೊಂಡಿದ್ದನು. ಹೀಗಾಗಿ ಊರವರು ಈತನ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಇಟ್ಟಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ನಾಗಯ್ಯ, ಯಾರಿಗೂ ಅನುಮಾನ ಬಾರದಂತೆ ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳುಗೆಡವಿ ಅಕ್ರಮ ದಂಧೆಗೆ ಇಳಿದಿದ್ದನು.
ದಾಳಿಯ ವೇಳೆ ಪೊಲೀಸರು ಬರೋಬ್ಬರಿ 685 ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಮಾರಾಟಕ್ಕೆ ಸಿದ್ಧ ಮಾಡಿಟ್ಟಿದ್ದ 17.74 ಕೆ.ಜಿ ಒಣ ಗಾಂಜಾ, ಸುಮಾರು ಒಂದು ಕೆ.ಜಿಯಷ್ಟು ಗಾಂಜಾ ಬೀಜಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ 30,000 ರೂಪಾಯಿ ನಗದು, ತೂಕದ ಯಂತ್ರ ಮತ್ತು ಮೊಬೈಲ್ ಫೋನ್ ಅನ್ನೂ ಸೀಜ್ ಮಾಡಲಾಗಿದೆ. ವಶಪಡಿಸಿಕೊಳ್ಳಲಾದ ಒಟ್ಟು ಗಾಂಜಾದ ಮೌಲ್ಯ ಸುಮಾರು 70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
https://www.newsics.com/2026/02/07/rakhi-sawant-says-she-is-ready-to-marry-mukesh-ambani/