https://youtube.com/shorts/kv9in5qxZnE?si=xMEQPbw5L2rTAx6o
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಚಾಲಕರ ಒಕ್ಕೂಟಗಳು ಫೆಬ್ರವರಿ 7ರಂದು ದೇಶಾದ್ಯಂತ ಮುಷ್ಕರ ನಡೆಸಲಿದ್ದಾರೆ.
ಇಂದು ಶನ ಓಲಾ, ಉಬರ್, ರ್ಯಾಪಿಡೋ ಚಾಲಕರು ದೇಶಾದ್ಯಂತ ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕ್ಯಾಬ್ ಮತ್ತು ಆಟೋ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಪ್ರತಿ ಕಿಲೋಮೀಟರ್ಗೆ ಕನಿಷ್ಠ 25 ರೂಪಾಯಿ ಬಾಡಿಗೆ ದರವನ್ನು ಸರ್ಕಾರವೇ ನಿಗದಿಪಡಿಸಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.ಕಂಪನಿಗಳು ಪಡೆಯುತ್ತಿರುವ ಹೆಚ್ಚಿನ ಕಮಿಷನ್ನಿಂದ ಚಾಲಕರಿಗೆ ಲಾಭ ಸಿಗುತ್ತಿಲ್ಲ. ಈ ಕಮಿಷನ್ ದರವನ್ನು ಕಡಿಮೆ ಮಾಡಬೇಕೆಂಬುದು ಮುಖ್ಯ ಆಗ್ರಹವಾಗಿದೆ.ಬಿಳಿ ಬೋರ್ಡ್ (ಖಾಸಗಿ) ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಅಧಿಕೃತ ಕ್ಯಾಬ್ ಚಾಲಕರ ಆದಾಯಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಇದನ್ನು ತಕ್ಷಣವೇ ನಿಷೇಧಿಸಬೇಕು. ಮೋಟಾರು ವಾಹನ ಮಾರ್ಗಸೂಚಿ 2025ರ ಅಡಿಯಲ್ಲಿ ಚಾಲಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಚಾಲಕರಿಗೆ ಮತ್ತು ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತೆ ಹಾಗೂ ವಿಮಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಯಾಣಿಕರ ಗಮನಕ್ಕೆ: ಈ ಮುಷ್ಕರದಿಂದಾಗಿ ಫೆಬ್ರವರಿ 7ರಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಓಲಾ, ಉಬರ್, ರ್ಯಾಪಿಡೋ ಮತ್ತು ಪೋರ್ಟರ್ ಸೇವೆಗಳು ಲಭ್ಯವಿರುವುದು ಅನುಮಾನ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಉತ್ತಮ.