https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಳಗಾವಿ: ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ಜತೆ ಈ ದಂಪತಿ 176 ಕಿ.ಮೀ. ಪ್ರಯಾಣಿಸಿ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಘಟನೆ ನಡೆದಿದೆ.
ಮಹಾರಾಷ್ಟ್ರದ ಪಂಢರಪುರದ ಈ ದಂಪತಿ ಕಳೆದ 15 ವರ್ಷಗಳಿಂದ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಪತ್ನಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಿದೆ.
ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ಜತೆ ಅನಾರೋಗ್ಯಪೀಡಿತ ಪತ್ನಿಗೆ ದೇವಿ ದರ್ಶನ ಮಾಡಿಸಿದ್ದಾರೆ. ಎಷ್ಟೇ ತೊಂದರೆ ಇದ್ದರೂ ದೇವಿ ದರ್ಶನ ಮಾಡಿದಾಗ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದರಿಂದಾಗಿ ಆಗಮಿಸಿದ್ದೇವೆ ಎಂದು ದಂಪತಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವುದು ವೈರಲ್ ಆಗಿದೆ.
Health Alert ಖರ್ಜೂರದ ಜ್ಯೂಸ್ ಕುಡಿಯುವ ಮುನ್ನ ಎಚ್ಚರ; ಕಾಡುತ್ತಿದೆ ಅಪಾಯಕಾರಿ ವೈರಸ್!
ರಾತ್ರಿ ವೇಳೆ ವಿವಾಹಿತ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಮುಖಂಡ: ಥಳಿಸಿದ ಯುವಕರು