https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ವಿಜಯಪುರ: ಅಗ್ನಿ ದುರಂತ ಸಂಭವಿಸಿ, ಒಂದು ಕೋಟಿಗೂ ಹೆಚ್ಚಿನ ಮೌಲ್ಯದ ಕಾರುಗಳು
ಸುಟ್ಟು ಕರಕಲಾಗಿರುವ ಘಟನೆ ನಗರ ಹೊರ ವಲಯ ರಾಷ್ಟ್ರೀಯ ಹೆದ್ದಾರಿ- 50 ರ ಬಳಿಯ ಎಚ್ ಎಂ ಕೆ ಕಾರು ಸರ್ವೀಸ್ ಸೆಂಟರ್‌ನಲ್ಲಿ ನಡೆದಿದೆ.
ಹನುಮಂತ ಕನಮಡಿ ಎಂಬುವವರಿಗೆ ಸೇರಿದ ಕಾರ್ ಸರ್ವೀಸ್ ಸೆಂಟರ್ ನಲ್ಲಿ,
ರಿಪೇರಿ ಹಾಗೂ ಸರ್ವೀಸ್ ಗಾಗಿ ಬಂದಿದ್ದ ಕಾರುಗಳು ಸುಟ್ಟು ಕರಕಲು ಆಗಿವೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ವಿವಿಧ ಕಂಪನಿಯ ಸುಮಾರು 20 ಕಾರುಗಳು ಸುಟ್ಟು ಭಸ್ಮವಾಗಿದ್ದು,
ಅದೃಷ್ಟವಶಾತ್ ಕಾರ್ ಸರ್ವೀಸ್ ಸೆಂಟರ್ ನಲ್ಲಿ ಯಾರೂ ಇರಲಿಲ್ಲ.
ಸರ್ವೀಸ್ ಸೆಂಟರ್ ನಲ್ಲಿ 35 ಲಕ್ಷ ರೂಪಾಯಿ ಬಿಡಿ ಭಾಗಗಳು ಕೂಡ ಬೆಂಕಿಗಾಹುತಿ ಆಗಿದೆ.
ಸ್ಥಳಕ್ಕೆ ಗೋಳಗುಮ್ಮಟ್ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖರ್ಜೂರದ ಜ್ಯೂಸ್ ಕುಡಿಯುವವರೇ ಮುನ್ನ ಎಚ್ಚರ; ಬಾಂಗ್ಲಾದೇಶದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆ