newsics.com
ನವದೆಹಲಿ: ಬಜೆಟ್ ಮಂಡನೆಗೂ ಮುನ್ನ ಚಿನ್ನ, ಬೆಳ್ಳಿ ದರ ಭಾರಿ ಇಳಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರದಲ್ಲಿ 27 ಸಾವಿರ ರೂಪಾಯಿ ಕಡಿಮೆಯಾಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 9000 ರೂ. ಇಳಿಕೆಯಾಗಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 13,468 ರೂ., ಬೆಳ್ಳಿ ಬೆಲೆ 2,65,652 ರೂ. ಇಳಿಕೆಯಾಗಿದೆ.
ಚಿನ್ನದ ಬೆಲೆಯು ಬಜೆಟ್ ದಿನವಾದ ಫೆಬ್ರವರಿ 1ರಂದು ಭರ್ಜರಿ ಇಳಿಕೆ ಕಂಡಿದೆ. ಬಜೆಟ್‌ಗೆ ಇನ್ನು ಕೆಲವೇ ಕ್ಷಣಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಚಿನ್ನದ ಬೆಲೆಯು 24 ಕ್ಯಾರೆಟ್‌ನ ಚಿನ್ನದ ಮೇಲೆ 10 ಗ್ರಾಂಗೆ 9,000 ಸಾವಿರ ರೂಪಾಯಿ ಇಳಿಕೆಯಾಗಿದೆ.
ಕಳೆದ 15 ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ವಿಪರೀತವಾದ ಏರಿಳಿತವಾಗುತ್ತಿದೆ. ಅದರಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ 8,000 ರೂ.ನಿಂದ 11,000 ರೂ. ವರೆಗೆ ಹೆಚ್ಚಳವಾಗಿರುವುದು ಹಾಗೂ ಅದೇ ರೀತಿ 8,000 ರೂ., 7000 ರೂ. ಇಳಿಕೆಯನ್ನೂ ಕಂಡಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುವುದಕ್ಕೂ ಇನ್ನೊಂದು ಗಂಟೆ ಇರುವಾಗಲೇ ಭಾರೀ ಇಳಿಕೆ ಕಂಡಿದೆ.
ಬೆಳ್ಳಿ ಬೆಲೆ ಭರ್ಜರಿ ಇಳಿಕೆ
ಇನ್ನು ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು ಬಜೆಟ್ ಮಂಡನೆಗೆ ಕೆಲವೇ ಕ್ಷಣಗಳ ಮುಂಚಿತವಾಗಿ ಬರೋಬ್ಬರಿ 27,000 ರೂ. ಇಳಿಕೆ ಕಂಡಿದೆ. ಇದು ಬೆಳ್ಳಿ ಪ್ರಿಯರಿಗೆ ಸಂತೋಷನ್ನುಂಟು ಮಾಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, COMEX ಚಿನ್ನದ ಬೆಲೆ ಶೇ. 8.35 ರಷ್ಟು ಇಳಿಕೆಯಾಗಿದ್ದು, ಟ್ರಾಯ್ ಔನ್ಸ್‌ಗೆ ಸರಿಸುಮಾರು USD 4907.5 ಕ್ಕೆ ತಲುಪಿದೆ. ಬೆಳಿಗ್ಗೆ 9:45 ಕ್ಕೆ ಸ್ಪಾಟ್ ಚಿನ್ನದ ಬೆಲೆ ಔನ್ಸ್‌ಗೆ USD 4,893.2 ಆಗಿದ್ದು, USD 434.45 ಅಥವಾ ಶೇಕಡಾ 8.15 ರಷ್ಟು ಇಳಿಕೆಯಾಗಿದೆ.