newsics.com
ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದ ಬಳಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾದರು. ಇದೀಗ ಯುಎಸ್ ಎಲೆಕ್ಷನ್ 2024ರ ಉಪಾಧ್ಯಕ್ಷೀಯ ಹುದ್ದೆಗೆ ಅಭ್ಯರ್ಥಿಯಾಗಿ ಟಿಮ್ ವಾಲ್ಜ್ ಅವರನ್ನು ಆಯ್ಕೆ ಮಾಡಲಾಗಿದೆ. ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಅವರನ್ನು ಮುಂಬರುವ ಚುನಾವಣೆಗೆ ತನ್ನ ಸಹ ಸ್ಪರ್ಧಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಮಾಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ವಾಲ್ಜ್ ಆಯ್ಕೆಯು ಡೆಮೋಕ್ರಾಟ್ ಪಕ್ಷದ ಪ್ರಚಾರಕ್ಕೆ ಗ್ರಾಮೀಣ ಮಧ್ಯಪಶ್ಚಿಮ ದೃಷ್ಟಿಕೋನವನ್ನು ನೀಡುತ್ತದೆ. ಜೊತೆಗೆ ಗಾಂಜಾ ಕಾನೂನುಬದ್ಧಗೊಳಿಸುವಿಕೆ ಮತ್ತು ಕಾರ್ಮಿಕರ ರಕ್ಷಣೆಯನ್ನು ಹೆಚ್ಚಿಸುವಂತಹ ಉದಾರ ನೀತಿ ಗುರಿಗಳನ್ನು ಸಹ ಹೊಂದಿದೆ. ಈ ಹಿನ್ನೆಲೆಯಲ್ಲಿ ವಾಲ್ಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.