https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ಬಿಜೆಪಿಯ ಮೇಯರ್ ಆಗಿ ವಿ.ವಿ.ರಾಜೇಶ್, ಉಪ ಮೇಯರ್ ಆಗಿ ಜಿ.ಎಸ್.ಆಶಾನಾಥ್ ಆಯ್ಕೆಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೇರಳ ಪ್ರವಾಸ ಕೈಗೊಂಡಿದ್ದರು. ಈ ವೇಳೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಭಾವುಕರಾದ ಜಿ.ಎಸ್.ಆಶಾ ನಾಥ್: ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಪಾದಮುಟ್ಟಿ ಆಶೀರ್ವಾದ ಪಡೆಯಲು ಮುಂದಾದರು. ಇನ್ನು ಜಿ.ಎಸ್.ಆಶಾ ನಾಥ್ ಕಾಲಿಗೆ ಬೀಳಲು ಬರುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ತಡೆದರು. ಜಿ.ಎಸ್.ಆಶಾ ನಾಥ್ ಅವರ ಕೈ ಹಿಡಿದು ನರೇಂದ್ರ ಮೋದಿ ನಮಸ್ಕಾರ ಮಾಡಿದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಕುರಿತ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜಿ.ಎಸ್.ಆಶಾ ನಾಥ್, “”ಇದು ಕೇವಲ ಒಂದು ಫೋಟೋವಲ್ಲ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಅತ್ಯಂತ ಗೌರವದಿಂದ ನಾನು ಶಿರಬಾಗಿ ಅವರ ಪಾದಗಳನ್ನು ಮುಟ್ಟಿದಾಗ, ಅಧಿಕಾರದ ಉತ್ತುಂಗದಲ್ಲಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು, ಅಷ್ಟೇ ವಿನಮ್ರತೆಯಿಂದ ಅದನ್ನು ತಡೆದು ನಮಸ್ಕರಿಸಿದರು” ಎಂದು ಹೇಳಿದ್ದಾರೆ.
ಸೌಜನ್ಯಕ್ಕೂ ನನ್ನ ಹೆಸರು ಹೇಳಲಿಲ್ಲ; ’45’ ಸಿನಿಮಾದ ಟೈಟಲ್ ಕುರಿತು ನಟ ಮಿತ್ರ ಹೇಳಿದ್ದೇನು?