https://youtube.com/shorts/qpCJajqGxrE?si=SXL74ga92cWkND8D
ಬೆಂಗಳೂರು: ಸಾಲು ಸಾಲು ರಜೆ ಇರುವ ಕಾರಣ ಖಾಸಗಿ ಬಸ್ ದರ ಏರಿಕೆಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಜನವರಿ 24 ರಂದು ನಾಲ್ಕನೇ ಶನಿವಾರ, ಜ.25 ಭಾನುವಾರ ಮತ್ತು ಸೋಮವಾರದಂದು ಗಣರಾಜ್ಯೋತ್ಸವ ನಿಮಿತ್ತ ಸತತ ಮೂರು ದಿನ ರಜೆ ಇದೆ. ಇದರಿಂದ ಶುಕ್ರವಾರ ಸಂಜೆಯಿಂದಲೇ ಬೆಂಗಳೂರಲ್ಲಿರುವ ಜನರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದರಿಂದ ಖಾಸಗಿ ಬಸ್ ದರದಲ್ಲಿ ಭಾರಿ ಹೆಚ್ಚಳವಾಗಿದೆ.
ಸಾಮಾನ್ಯ ದಿನಗಳಲ್ಲಿ ಸ್ಲೀಪರ್ ಬಸ್ ದರ ₹500 ರಿಂದ ₹800, ₹1000 ಇರುವ ರೇಟ್ ಇದೀಗ 2000 ಗಡಿ ದಾಟಿದೆ. ಇದರಿಂದ ರಜೆ ಇದ್ರೂ ತಮ್ಮ ಊರಿಗೆ ಹೋಗಲು ದುಬಾರಿ ವೆಚ್ಚ ಮಾಡಬೇಕಾಗಿದ್ದು, ಹಿಂದೇಟು ಹಾಕ್ತಿದ್ದಾರೆ.
ಟಿಕೆಟ್ ದರ ಎಷ್ಟು ಹೆಚ್ಚಾಗಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು-ಮಂಗಳೂರು : ಸಾಮಾನ್ಯ ದಿನದ ದರ ₹500- ₹800, ಇಂದಿನ ದಿನದ ದರ ₹1400- ₹2000
ಬೆಂಗಳೂರು – ಉಡುಪಿ : ಸಾಮಾನ್ಯ ದಿನದ ದರ ₹600- ₹750, ಇಂದಿನ ದಿನದ ದರ ₹1650-₹1699
ಬೆಂಗಳೂರು – ಚಿಕ್ಕಮಗಳೂರು : ಸಾಮಾನ್ಯ ದಿನದ ದರ ₹550 ₹600, ಇಂದಿನ ದರ ₹1600-₹1500
ಬೆಂಗಳೂರು-ಹಾಸನ : ಸಾಮಾನ್ಯ ದಿನದ ದರ ₹650 ₹850, ಇಂದಿನ ದರ ₹1000-₹1200
ಬೆಂಗಳೂರು- ಬೆಳಗಾವಿ : ಸಾಮಾನ್ಯ ದಿನದ ದರ ₹1200 – ₹1300, ಇಂದಿನ ದರ ₹2500-₹3000
ಜನವರಿ 24 ರಂದು ಶನಿವಾರ, ಜನವರಿ 25 ರಂದು ಭಾನುವಾರ ಹಾಗೆಯೇ ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಮೂರು ದಿನಗಳ ಸಾಲು ಸಾಲು ರಜೆ ಇದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವು ಪ್ರದೇಶಗಳಿಗೆ ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ ನಡೆಸಲಿವೆ.