Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 3 ಕೋಟಿ ಆಸ್ತಿಗಾಗಿ ಹೆಂಡತಿಯನ್ನೇ ಬಿಟ್ಟು ಹೋದ ಗಂಡ!
ದೇಶಪ್ರಮುಖ

3 ಕೋಟಿ ಆಸ್ತಿಗಾಗಿ ಹೆಂಡತಿಯನ್ನೇ ಬಿಟ್ಟು ಹೋದ ಗಂಡ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

3 ಕೋಟಿ ರೂ, ಹಣ ಬಂದ ತಕ್ಷಣ ಹೊಸ ಜೀವನದ ಬದಲಾವಣೆಯನ್ನು ಹರಿಸಿ ಹೆಂಡತಿಯನ್ನು ಬಿಟ್ಟು ಗಂಡನೊಬ್ಬ ತನ್ನ ತಂದೆಯ ಊರಿಗೆ ಹೋದ. ಆದರೆ, ಪಟ್ಟಣ್ಣದಲ್ಲಿ ಒಬ್ಬಂಟಿಯಾಗಿದ್ದ ಪತ್ನಿ ಕೆಲ ವರ್ಷಗಳ ಬಳಿಕ ಬಿಟ್ಟು ಹೋದ ಗಂಡನಿಗೆ ಜೀವನಪರ್ಯಂತ ನೆನಪಿಲ್ಲಿಟ್ಟುಕೊಳ್ಳಬೇಕಾದ ಪಾಠವೊಂದನ್ನು ಕಲಿಸಿದ್ದಾರೆ.

ಹಿಮಿ ಶರ್ಮಾ ಮತ್ತು ಅವರ ಎರಡು ವರ್ಷದ ಮಗನನ್ನು ಅವರ ಗಂಡ 3 ಕೋಟಿ ರೂಪಾಯಿ ಆಸ್ತಿಗಾಗಿ ಬಿಟ್ಟು ಹೋಗಿದ್ದರು. ಈ ಹಿಂದೆ ಹಿಮಿ ಅವರು ತಮ್ಮ ಜೀವನದ ನೋವಿನ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅವರ ಗಂಡನ ಈ ನಿರ್ಧಾರವು ಹಿಮಿ ಶರ್ಮಾ ಅವರ ಬದುಕನ್ನು ಒಂದು ದೊಡ್ಡ ಕಂದಕಕ್ಕೆ ತಳ್ಳಿತು ಅಂತ ಹೇಳಿಕೊಂಡಿದ್ದರು.

ಇದೀಗ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗೆ ಮಾತನಾಡಿದ ಹಿಮಿ ಶರ್ಮಾ ಅವರು 2005 ರಲ್ಲಿ ಎಂಬಿಎ ಓದುತ್ತಿರುವಾಗ ತನ್ನ ಗಂಡನನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು ಅಂತ ನೆನಪಿಸಿಕೊಂಡರು. ಜಾತಿ ವ್ಯತ್ಯಾಸಗಳಿಂದಾಗಿ ಅವರ ಸಂಬಂಧವು ಎರಡೂ ಕುಟುಂಬಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಆದರೂ ಸಹ ದಂಪತಿಗಳು ಮದುವೆಯಾದರು.

ನಮ್ಮ ಮದುವೆಯ ನಂತರ ಮೂರು ವರ್ಷಗಳ ಕಾಲ, ನನ್ನ ಗಂಡ ನನ್ನ ಬಗ್ಗೆ ತುಂಬಾನೇ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಆದರೆ  ನವೆಂಬರ್ 2010 ರಲ್ಲಿ ಹಿಮಿ ಅವರನ್ನು ಗಂಡ ಬಿಟ್ಟು ಹೋದಾಗ ಅವರ ಜೀವನವು ಒಂದು ಕ್ಷಣ ಕೊನೆ ಆಯ್ತೆ ಎಂಬ ಭಾವನೆ ಮೂಡಿತಂತೆ. ನನ್ನ ಗಂಡನ ತಾಯಿ ಹೆಂಡತಿ ಮತ್ತು ಮಗನನ್ನು ಆಯ್ಕೆ ಮಾಡಿಕೊಳ್ಳುತ್ತಿಯಾ ಅಥವಾ 3 ಕೋಟಿ ರೂಪಾಯಿ ಆಸ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿಯಾ ಅಂತ ಕೇಳಿದ್ದಕ್ಕೆ, ಹಣ ಮತ್ತು ಆಸ್ತಿಯನ್ನು ಆಯ್ಕೆ ಮಾಡಿಕೊಂಡರು, ಅಂತ ಅವರು ಹೇಳಿದರು.

ಎರಡು ವರ್ಷದ ಮಗುವಿನೊಂದಿಗೆ ಏಕಾಂಗಿಯಾಗಿ ಉಳಿದ ಹಿಮಿ ಶರ್ಮಾ, ಶಿಕ್ಷಕಿಯಾಗಿ ತಿಂಗಳಿಗೆ ಕೇವಲ 5,000 ರೂಪಾಯಿ ಸಂಬಳ ಸಿಗುವ ಕೆಲಸಕ್ಕೆ ಸೇರಿಕೊಂಡರು. ಯಾರದೂ ಸಪೋರ್ಟ್ ಇಲ್ಲದೆ, ಅವರು ಪೇಯಿಂಗ್ ಗೆಸ್ಟ್ ಆಗಿ ತೆರಳಿದರು. ‘ಮೊದಲಿಗೆ ನಾನು ಈ ಒಂದು ದಿನ ಮುಗಿದರೆ ಸಾಕು ಎಂಬಂತೆ ಬದುಕಲು ಶುರು ಮಾಡಿದೆ, ಎಂದರೆ ನನ್ನ ಮಗನಿಗೆ ಆಹಾರ ಸಿಕ್ಕರೆ ಸಾಕು ಮತ್ತು ಮನೆಯ ಬಿಲ್‌ಗಳನ್ನು ಪಾವತಿಸಲು ಪ್ರಯತ್ನಿಸಿದೆ.

ನನ್ನ ತಂದೆ ಪ್ರತಿ ತಿಂಗಳು 10,000 ರೂಪಾಯಿ ಬಾಡಿಗೆ ಪಾವತಿಸಲು ನನ್ನನ್ನು ಕೇಳಿದರು, ನನ್ನನ್ನು ಒಂದು ದೊಡ್ಡ ಹೊರೆಯಂತೆ ಅವರು ನೋಡಿದರು,’ ಅಂತ ಅವರು ಹೇಳಿಕೊಂಡರು. ಎಷ್ಟೋ ಸಲ ಮಗನ ಫೀಸ್ ಕಟ್ಟದೆ ಇರುವುದಕ್ಕೆ ಶಾಲೆಯವರು ಅವರನ್ನು ಕರೆದು ಹಣ ಕೇಳುತ್ತಿದ್ದರಂತೆ. ತೀವ್ರವಾದ ಹಣದ ತೊಂದರೆಗಳ ಹೊರತಾಗಿ, ಅವರು ಸಾಮಾಜಿಕ ಬಹಿಷ್ಕಾರವನ್ನೂ ಸಹ ಎದುರಿಸಿದರು.

ವ್ಯಾಪಕ ನಿರುತ್ಸಾಹದ ಹೊರತಾಗಿಯೂ ಅವರು ಕೆನಡಿಯನ್ ವೀಸಾಕ್ಕೆ ಅರ್ಜಿ ಸಲ್ಲಿಸಿದರು. 2019 ರಲ್ಲಿ, ಅವರು ಕೆನಡಾಕ್ಕೆ ತೆರಳಿದರು, ಒಂದು ತಿಂಗಳೊಳಗೆ ಅವರು ಕಾಲೇಜು ಪ್ರಾಧ್ಯಾಪಕಿಯಾಗಿ ಕೆಲಸಕ್ಕೆ ಸೇರಿಕೊಂಡರು. ಯಾರ ಸಪೋರ್ಟ್ ಸಹ ಇಲ್ಲದೆ, ಹೊಸ ದೇಶದಲ್ಲಿ ಮೊದಲಿನಿಂದ ಪ್ರಾರಂಭಿಸಿ, ಅವರು ತಮ್ಮ ಜೀವನವನ್ನು ಹಂತ ಹಂತವಾಗಿ ಪುನರ್ನಿರ್ಮಿಸಿಕೊಂಡರು. ಇಂದು, ಅವರು 3 ಕೋಟಿ ರೂಪಾಯಿ ಮೌಲ್ಯದ ಸ್ವಂತ ಮನೆಯನ್ನು ಹೊಂದಿದ್ದಾರೆ.

https://www.newsics.com/2026/01/24/big-disappointment-for-non-veg-lovers-huge-hike-in-prices-of-chicken-mutton/

TAGGED:Husband leaves wife for 3 crores property!
Share This Article
Facebook Twitter Copy Link Print
Previous Article ನಾನ್‌ವೆಜ್‌ ಪ್ರಿಯರಿಗೆ ಭಾರಿ ನಿರಾಸೆ: ಚಿಕನ್, ಮಟನ್ ಬೆಲೆಯಲ್ಲಿ ಭಾರೀ ಏರಿಕೆ
Next Article ಇನ್ಮುಂದೆ ರಾಜ್ಯದಲ್ಲಿ SSLC ಟಾಪರ್ ಗಳಿಗೆ ಲ್ಯಾಪ್‌ಟಾಪ್ ಬದಲು 50,000 ಪ್ರೋತ್ಸಾಹಧನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?