Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇದು ಟೆಕ್ನಾಲಜಿ ಯುಗ. ಏನೇ ಬೇಕೆಂದರು ಕ್ಷಣ ಮಾತ್ರದಲ್ಲಿ ಮೊಬೈಲ್, ಕಂಪ್ಯೂಟರ್ನಲ್ಲಿ ನೋಡಿ ಖರೀದಿ ಮಾಡಬಹುದು . ಅದೇ ರೀತಿ ಇಂದಿನ ದಿನದಲ್ಲಿ ಏನೇ ಬೇಕೆಂದರು ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಖರೀದಿ ಮಾಡಬಹುದು.ಇದೀಗ ಇಲ್ಲೊಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ವಾಚ್ ಆರ್ಡರ್ ಮಾಡಿದ್ದಾನೆ. ಆದ್ರೆ ಡೆಲಿವರಿಯಾದ ಬಾಕ್ಸ್ ನೋಡಿ ಆತ ಬೆಚ್ಚಿಬಿದ್ದಿದ್ದಾನೆ. ಹಾಗಿದ್ರೆ ಅಷ್ಟಕ್ಕೂ ಡೆಲಿವರಿ ಬಾಕ್ಸ್‌ನಲ್ಲಿ ಏನಿತ್ತು ಗೊತ್ತಾ?
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ಭರ್ಜರಿ ಆಫರ್ ನಂಬಿ ವಾಚ್ ಆರ್ಡರ್ ಮಾಡಿದ ವ್ಯಕ್ತಿಗೆ ಆಲೂಗಡ್ಡೆ ಪಾರ್ಸಲ್ ಬಂದಿದೆ. ಈ ಘಟನೆ ರಾಯಚೂರು ಜಿಲ್ಲೆಯ ಯರಮರಸ್ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ದಗ್ಗುಬಾಟಿ ಬಾಬು ಎಂಬವರು ಕೆಲಸಕ್ಕಾಗಿ ರಾಯಚೂರಿಗೆ ಬಂದಿದ್ದು, ಯರಮರಸ್ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಜನವರಿ 13ರಂದು ಸಾಮಾಜಿಕ ಜಾಲತಾಣದಲ್ಲಿ 5 ಸಾವಿರ ರೂ. ಬೆಲೆ ಬಾಳುವ ವಾಚ್ ಕೇವಲ 1,200 ರೂ.ಗೆ ಸಿಗುತ್ತದೆ ಎಂಬ ಜಾಹೀರಾತು ನೋಡಿ ಅವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ.
ಕೊರಿಯರ್ ಮೂಲಕ ಪಾರ್ಸಲ್ ಬಂದಿದ್ದು, ಕ್ಯಾಶ್ ಆನ್ ಡೆಲಿವರಿ ಮೂಲಕ ಹಣ ಪಾವತಿಸಿ ಬಾಬು ಪಾರ್ಸಲ್ ಪಡೆದಿದ್ದಾರೆ. ಬಾಕ್ಸ್ ಅನ್ನು ಅಲ್ಲಿಯೇ ತೆರೆದು ತೋರಿಸುವಂತೆ ಅವರು ಕೇಳಿಕೊಂಡಾಗ, ವಾಚ್ ಬದಲು ಹಳೆ ಬಟ್ಟೆಯಲ್ಲಿ ಸುತ್ತಿದ ಒಂದು ಆಲೂಗಡ್ಡೆ ಕಂಡು ಬೆಚ್ಚಿಬಿದ್ದಿದ್ದಾರೆ.
ಇದೀಗ ಈ ಕುರಿತು ಗ್ರಾಹಕ ನ್ಯಾಯಾಲಯ ಹಾಗೂ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಾಬು ಮುಂದಾಗಿದ್ದಾರೆ.