Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಧುರಂಧರ್ ಚಿತ್ರವು ಪ್ರಸ್ತುತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸುತ್ತಿದೆ. ಹೆಸರಿಗೆ ಇದು ಹಿಂದಿ ಚಿತ್ರವಾಗಿದ್ದರೂ, ವಿಶೇಷವಾಗಿ ಕರ್ನಾಟಕ ,ತೆಲುಗು, ತಮಿಳು ರಾಜ್ಯಗಳಲ್ಲಿಯೂ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ.ಇದೀಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ಮೂಲಕ ರಾಷ್ಟ್ರೀಯ ಖ್ಯಾತಿಗೆ ಏರಿದ ಆದಿತ್ಯ ಧಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಧುರಂಧರ್’ ಸಿನಿಮಾ ಒಟಿಟಿಗೆ ಬರುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಜನವರಿ 30ರಂದು ನೆಟ್ ಫಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ಈಗಾಗಲೇ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ.
‘ಧುರಂಧರ್’ ಸಿನಿಮಾವನ್ನು ನೆಟ್ ಫಿಕ್ಸ್‌ನಲ್ಲಿ ಹಿಂದಿ, ತೆಲಗು, ತಮಿಳು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದು. ‘ಧುರಂಧರ್’ ಸಿನಿಮಾದ ಹಾಡಿನ ರೀಲ್ಸ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿದೆ.
https://www.newsics.com/2026/01/22/private-bus-catches-fire-three-burnt-alive/