Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಾವೇರಿ: ನಿಷೇಧವಿದ್ದರೂ ಇಬ್ಬರು ಮನೆ ಮಾಲೀಕರು ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮಲಗುಂಡಿ ಸ್ವಚ್ಛಗೊಳಿಸಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.
ಕುಸನೂರು ಗ್ರಾಮದ ನಿವಾಸಿಗಳಾದ ಬಸವರಾಜ ಪೂಜಾರ ಮತ್ತು ಸುರೇಶ ಪೂಜಾರ ಎಂಬುವರ ಮನೆಯಲ್ಲಿ ಶೌಚಗೃಹದ ಗುಂಡಿ ತುಂಬಿದ್ದ ಕಾರಣ, ಈ ಇಬ್ಬರು ಮಾಲೀಕರು ಕಾನೂನಿನ ಭಯವಿಲ್ಲದೆ ಕಾರ್ಮಿಕರನ್ನು ಕರೆಸಿ ಮಲವನ್ನ ತೆರವುಗೊಳಿಸಿದ್ದಾರೆ. ಸಾತೇನಹಳ್ಳಿ ಮೂಲದ ಇಬ್ಬರು ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಈ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪ್ರತ್ಯಕ್ಷವಾಗಿ ನಡೆಯುತ್ತಿದ್ದ ಅಮಾನವೀಯ ಕಾರ್ಯವನ್ನು ಕಂಡು ಅಧಿಕಾರಿಗಳು ಕೂಡಲೇ ಕೆಲಸವನ್ನು ಸ್ಥಗಿತಗೊಳಿಸಿ, ಕಾರ್ಮಿಕರನ್ನು ರಕ್ಷಿಸಿ, ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
https://www.newsics.com/2026/01/21/five-year-old-calf-dies-due-to-drivers-negligence/