Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಒಂಟಿತನವೆಂಬುದು ಮನುಷ್ಯನ ಜೀವನದಲ್ಲಿ ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಕೆಲವರು ಒಂಟಿತನವನ್ನೇ ಜೀವಮಾನದುದ್ದಕ್ಕೂ ಆಯ್ಕೆಮಾಡಿಕೊಂಡರೆ ಇನ್ನು ಕೆಲವರು ಪತಿಯಿಂದ ದೂರವಾಗಿ, ಸಂಗಾತಿಯನ್ನು ಕಳೆದುಕೊಂಡು ಒಂಟಿತನದ ಬದುಕು ಒಳ್ಳೆಯದು ಎಂದು ಆಯ್ಕೆಮಾಡಿಕೊಂಡಿರುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಅಮೆರಿಕನ್ ಲೈಫ್‌ನ ಸರ್ವೆ ಸೆಂಟರ್‌ನ 2023ರ ಸಮೀಕ್ಷೆಯ ಪ್ರಕಾರ, ಜೆನ್ ಝಿ (Gen Z) (1997 ಮತ್ತು 2012ರ ನಡುವೆ ಜನಿಸಿದವರು) ಹದಿಹರೆಯದಲ್ಲಿ ತಾವು ಸಂಬಂಧದಲ್ಲಿದ್ದೆವು ಎಂದು ವರದಿ ಮಾಡಿರುವ ಸಂಖ್ಯೆಯು ಜೆನ್ ಎಕ್ಸ್ (Gen X)ಗಿಂತ ಶೇ. 20 ರಷ್ಟು ಮತ್ತು ಬೇಬಿ ಬೂಮರ್ಸ್ ಗಿಂತ ಶೇ. 22 ರಷ್ಟು ಕಡಿಮೆಯಿದೆ.
ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಬಾಯ್ಸ್ ಅಂಡ್ ಮೆನ್ ನಡೆಸಿದ 2025ರ ಅಧ್ಯಯನದ ಪ್ರಕಾರ, ಶೇ. 40ಕ್ಕಿಂತ ಹೆಚ್ಚು ಜೆನ್ ಝಿ ಪುರುಷರು ಕಳೆದ ವರ್ಷ ತಮಗೆ ಹದಿಹರೆಯದಲ್ಲಿ ಯಾವುದೇ ಸಂಬಂಧದ ಅನುಭವವಾಗಿಲ್ಲ ಎಂದು ಹೇಳಿದ್ದಾರೆ.
ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವುದು ಮಧ್ಯಮ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ ಎಂಬುದನ್ನು ತೋರಿಸುತ್ತವೆ ಎಂದು ಹಿರಿಯ ಸಂಶೋಧಕರಾದ ಮೈಕೆಲ್ ಕ್ರಾಮರ್ ವಿವರಣೆ ನೀಡಿದ್ದಾರೆ.
ಒಟ್ಟಾರೆಯಾಗಿ, ನಮ್ಮ ಸಂಶೋಧನೆಗಳು ಯುವ ವಯಸ್ಸಿನಲ್ಲಿ ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವುದು ಮಧ್ಯಮ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ ಎಂಬುದನ್ನು ತೋರಿಸುತ್ತವೆ” ಎಂದು ಹಿರಿಯ ಸಂಶೋಧಕರಾದ ಮೈಕೆಲ್ ಕ್ರಾಮರ್ ವಿವರಣೆ ನೀಡಿದ್ದಾರೆ.
ಶಿಕ್ಷಣದ ಸಮಸ್ಯೆ: ಸಂಶೋಧಕರು 16 ರಿಂದ 29 ವರ್ಷ ವಯಸ್ಸಿನ ಜನರ ಪ್ರತಿಕ್ರಿಯೆಗಳನ್ನು ಸಂಗ್ರಹ ಮಾಡಿ ವರದಿ ತಯಾರು ಮಾಡಿದ್ದಾರೆ. ಪುರುಷರು, ಉನ್ನತ ಶಿಕ್ಷಣ ಪಡೆದವರು, ಪ್ರಸ್ತುತ ಕಡಿಮೆ ನೆಮ್ಮದಿಯನ್ನು ಹೊಂದಿದ್ದಾರೆ. ಒಬ್ಬಂಟಿಯಾಗಿ ಅಥವಾ ಪೋಷಕರೊಂದಿಗೆ ವಾಸಿಸುವವರು ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವ ಸಾಧ್ಯತೆ ಹೆಚ್ಚು ಎಂದು ಈ ವರದಿ ಹೇಳಿದೆ.
ಶಿಕ್ಷಣದ ಮೇಲೆ ಹೆಚ್ಚಿನ ಗಮನ ಹರಿಸುವುದು ಮತ್ತು ಸಂಬಂಧಗಳನ್ನು ಮುಂದೂಡುವುದರ ನಡುವಿನ ಸಂಬಂಧದ ಬಗ್ಗೆ ಹಿಂದಿನ ಸಂಶೋಧನೆಗಳನ್ನು ಈ ಫಲಿತಾಂಶಗಳು ಬೆಂಬಲಿಸುತ್ತವೆ ಎಂಬುದನ್ನು ಗಮನಿಸಲಾಗಿದೆ.
ಯುವಜನರಲ್ಲಿ ಮೊದಲ ಸಂಬಂಧದ ಪ್ರಾಮುಖ್ಯತೆಯನ್ನು ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಮೊದಲ ಬಾರಿಗೆ ಸಂಗಾತಿಯನ್ನು ಹೊಂದಿದವರು ಹೆಚ್ಚಿನ ಜೀವನ ತೃಪ್ತಿಯನ್ನು ಹೊಂದಿರುವುದಾಗಿ ಮತ್ತು ಕಡಿಮೆ ಒಂಟಿತನವನ್ನು ಅನುಭವಿಸುತ್ತಾರೆ ಎಂದು ತಿಳಿಸಿದ್ದಾರೆ.
ಒಂಟಿತನದ ಸಮಸ್ಯೆ: ಒಂಟಿತನದಿಂದ ಉಂಟಾಗುವ ನಕಾರಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ವ್ಯಾಪಕವಾದ ಸಂಶೋಧನೆ ನಡೆದಿದೆ ಮತ್ತು ಈ ಕುರಿತು ಹಲವು ಆತಂಕಗಳನ್ನು ಪಟ್ಟಿ ಮಾಡಲಾಗಿದೆ.
ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಾರ, ಒಂಟಿತನವು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತನಾಳಗಳು, ರೋಗನಿರೋಧಕ ಶಕ್ತಿ ಮತ್ತು ಹೃದಯದ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತದೆ.
ಒಂಟಿತನಕ್ಕೆ ಸಂಬಂಧಿಸಿದ ಇತರ ಆರೋಗ್ಯ ಅಪಾಯಗಳೆಂದರೆ ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆ, ಮಧುಮೇಹ, ಪಾರ್ಶ್ವವಾಯು, ಆತ್ಮಹತ್ಯೆ ಮತ್ತು ಅಕಾಲಿಕ ಮರಣ.
ಒತ್ತಡವು ದೇಹದ ಮೇಲೆ ಬೀರುವ ಪರಿಣಾಮ ನಮಗೆ ತಿಳಿದಿದೆ ಮತ್ತು ಒಂಟಿತನವು ಅತ್ಯಂತ ಹೆಚ್ಚು ಒತ್ತಡವನ್ನು ನೀಡುತ್ತದೆ ಎಂದು ಮನಶ್ಶಾಸ್ತ್ರಜ್ಞ ಡಾ. ಆಡಮ್ ಬೋರ್ಲ್ಯಾಂಡ್ ಕ್ಲಿನಿಕ್‌ಗೆ ತಿಳಿಸಿದ್ದಾರೆ.