Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ್ದು, ಈ ವರ್ಷದ ಮೊದಲ ವಿಧಾನಸಭಾ ಅಧಿವೇಶನದಲ್ಲಿ ರಾಷ್ಟ್ರಗೀತೆಯನ್ನು ಅವಮಾನಿಸಲಾಗಿದೆ ಎಂದು ಹೇಳಿ ಸದನದಿಂದ ಹೊರನಡೆದರು.
ರಾಜ್ಯಪಾಲರಾದ ರವಿ ನಿರ್ಗಮನದ ಬಳಿಕ, 13 ಅಂಶಗಳ ವಿವರಣೆಯನ್ನು ಅವರ ಕಚೇರಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ರಾಜ್ಯಪಾಲರ ಮೈಕ್ರೊಫೋನ್ನ್ನು ಅನೇಕ ಸಲ ಆಫ್ ಮಾಡಿದೆ ಮತ್ತು ಅವರ ಸರ್ಕಾರದ ಸಾಧನೆಗಳ ಬಗ್ಗೆ ಹಲವಾರು ಆಧಾರರಹಿತ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದೆ ಎಂದು ಅದರಲ್ಲಿ ತಿಳಿಸಲಾಗಿದೆ.ತಮಿಳುನಾಡು ಕೈಗಾರಿಕಾ ಮತ್ತು ವ್ಯವಹಾರ ಸಂಬಂಧಿತ ಹೂಡಿಕೆಗಳಲ್ಲಿ 12 ಲಕ್ಷ ಕೋಟಿ ರೂ.ಗಳನ್ನು ಆಕರ್ಷಿಸಿದೆ ಎಂದು ಡಿಎಂಕೆ ಹೇಳಿಕೊಂಡಿರುವುದನ್ನು ರಾಜ್ಯಪಾಲರ ಕಚೇರಿ ಟೀಕಿಸಿದ್ದು, ನಿರೀಕ್ಷಿತ ಹೂಡಿಕೆದಾರರೊಂದಿಗಿನ ಹಲವು ಒಪ್ಪಂದಗಳು ಕಾಗದದ ಮೇಲೆ ಮಾತ್ರ ಉಳಿದಿರುವುದರಿಂದ ಇದು ಸತ್ಯಕ್ಕೆ ದೂರವಾಗಿದೆ ಎಂದು ರವಿ ಹೇಳಿದರು.ವಾಸ್ತವ ಹೂಡಿಕೆಯು ಅದರ ಒಂದು ಸಣ್ಣ ಭಾಗವೇ ಅಲ್ಲ. ಹೂಡಿಕೆ ದತ್ತಾಂಶವು ತಮಿಳುನಾಡು ಹೂಡಿಕೆದಾರರಿಗೆ ಕಡಿಮೆ ಆಕರ್ಷಕವಾಗುತ್ತಿದೆ ಎಂದು ತೋರಿಸುತ್ತದೆ. ನಾಲ್ಕು ವರ್ಷಗಳ ಹಿಂದಿನವರೆಗೂ ತಮಿಳುನಾಡು ವಿದೇಶಿ ನೇರ ಹೂಡಿಕೆಯಲ್ಲಿ ನಾಲ್ಕನೇ ಅತಿದೊಡ್ಡ ರಾಜ್ಯವಾಗಿತ್ತು. ಇಂದು ಅದು ಆರನೇ ಸ್ಥಾನದಲ್ಲಿ ಉಳಿಯಲು ಹೆಣಗಾಡುತ್ತಿದೆ ಎಂದರು.
ರಾಜ್ಯಪಾಲರಿಗಾಗಿ ಬರೆದ ಭಾಷಣದಲ್ಲಿ, ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳು ಶೇ. 55 ಕ್ಕಿಂತ ಹೆಚ್ಚು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಶೇ. 33 ಕ್ಕಿಂತ ಹೆಚ್ಚು ಹೆಚ್ಚಳವಾಗಿದ್ದರೂ”, ಮಹಿಳೆಯರ ಸುರಕ್ಷತೆಯ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಪಾಲರ ಕಚೇರಿ ದೂರಿದೆ.
SC-ST ಕಾಯ್ದೆಯಡಿ ಅವಹೇಳನಕಾರಿ ಭಾಷೆ ಬಳಸುವುದು ಅಪರಾಧವಲ್ಲ; ಸುಪ್ರೀಂ ತೀರ್ಪು