Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಟೀಚರ್ ಹೊಡೆಯುತ್ತಾರೆ ನಾನು ಶಾಲೆಗೆ ಹೋಗಲ್ಲ ಎಂದು ಅಳುತ್ತಿದ್ದ ಮಗಳ ಕಣ್ಣೀರು ನೋಡಿ ತಂದೆ ಕಣ್ಣೀರಾಗಿದ್ದಾರೆ. ಮಗಳನ್ನು ಕರೆದುಕೊಂಡು ನೇರವಾಗಿ ಶಾಲೆ ಬಂದ ತಂದೆ, ಆಕೆಯ ತರಗತಿಗೆ ತೆರಳಿ ಆಕೆಯ ಜೊತೆಗೆ ಬೆಂಚ್‌ನಲ್ಲಿ ಕುಳಿತುಕೊಂಡು ತರಗತಿ ಟೀಚರ್‌ಗೆ ಕಣ್ಣೀರಿನ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮಗಳು ತಾನು ಶಾಲೆಗೆ ಹೋಗಲ್ಲ, ಟೀಟರ್ ಹೊಡೆಯುತ್ತಾರೆ ಎಂದಿದ್ದಾಳೆ. ಈ ಮಾತು ಕೇಳಿ ತಂದೆಗೆ ಆಘಾತವಾಗಿದೆ. ತಾಯಿ ಇಲ್ಲದ ಕೊರಗಿನಲ್ಲಿರುವ ಮಗಳು ಇದೀಗ ಹೊಡೆಯುತ್ತಾರೆ ಎಂದು ಕಣ್ಣೀರಿಟ್ಟಾಗ ತಂದೆಗೆ ದಿಕ್ಕೇ ತೋಚಲಿಲ್ಲ. ಮಗಳಿಗೆ ಸಮಾಧಾನ ಮಾಡಿದ ತಂದೆ, ತಾನು ಟೀಚರ್ ಬಳಿ ಮಾತನಾಡುತ್ತೇನೆ. ಯಾವತ್ತೂ ಹೊಡೆಯಲ್ಲ ಎಂದು ಸಮಾಧಾನ ಪಡಿಸಿದ್ದಾರೆ. ಬಳಿಕ ಮಗಳನ್ನು ಕರೆದುಕೊಂಡು ಶಾಲೆಗೆ ಆಗಮಿಸಿದ ತಂದೆ ತರಗತಿಗೆ ತೆರಳಿದ್ದಾರೆ. ಅಸಹಾಯಕರಾಗಿ ಕುಳಿತ ತಂದೆ ಟೀಚರ್ ಬಳಿ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆ ಶಾಲೆಗೆ ಬರಲು ಅಳುತ್ತಿದ್ದಾಳೆ. ಆಕೆಯ ಕಣ್ಣೀರು ನನಗೆ ನೋಡಲು ಸಾಧ್ಯವಿಲ್ಲ. ಆಕೆ ತಾಯಿ ಇಲ್ಲದೆ ಬೆಳೆದಿದ್ದಾಳೆ. ತಾಯಿ ಅಗಲಿಕೆ ನೋವು ಆಕೆಗೆ ಬರಬಾರದು ನಾನು ಪ್ರಯತ್ನಿಸುತ್ತಿದ್ದೇನೆ. ಕೈಮುಗಿದು ಬೇಡಿಕೊಳ್ಳುತ್ತೇನೆ, ಆಕೆಯ ಹೊಡೆಯಬೇಡಿ ಎಂದು ತಂದೆ ಟೀಚರ್ ಮುಂದೆ ಕಣ್ಣೀರಿಟ್ಟಿದ್ದಾರೆ.
ಮಗಳನ್ನು ಅಪ್ಪಿಕೊಂಡು ತಂದೆ ಟೀಚರ್ ಮುಂದೆ ತಂದೆ ಕಣ್ಣೀರಿಟ್ಟಿದ್ದಾರೆ. ತಂದೆ ಕಣ್ಮೀರಿಡುತ್ತಿರುವುದನ್ನು ನೋಡಿ ಮಗಳು ಕೂಡ ಕಣ್ಣೀರಿಟ್ಟಿದ್ದಾರೆ. ಇತರ ಶಾಲಾ ಮಕ್ಕಳು ಕೂಡ ಭಾವುಕರಾಗಿದ್ದಾರೆ. ಈ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ತಂದೆಯ ಅಸಹಾಯಕತೆ, ನೋವು, ಮಗಳನ ಮೇಲಿನ ಪ್ರೀತಿ, ತಾಯಿ ಇಲ್ಲದ ಕೊರಗು ಎಲ್ಲವೂ ಚರ್ಚೆಯಾಗುತ್ತಿದೆ.
ಬಿಗ್ ಬಾಸ್ ಗೆದ್ದ ಖುಷಿಯಲ್ಲಿ ಮಗನ ಮದುವೆ ಬಗ್ಗೆ ಬಾಯ್ಬಿಟ್ಟ ಗಿಲ್ಲಿ ತಾಯಿ!