newsics.com
ರಾಜ್ಯದ ಮದ್ಯ ಪ್ರಿಯರಿಗೆ ಶುಭ ಸದ್ದಿ ಮತ್ತು ಕಹಿ ಸುದ್ದಿ ಎರಡೂ ಸಿಗಲಿವೆ. ಹೈಫೈ ಮದ್ಯಪ್ರಿಯರಿಗೆ ಗುಡ್ ನ್ಯೂಸ್, ಸಾಮಾನ್ಯ ಮದ್ಯಗಳ ಪ್ರಿಯರಿಗೆ ಬ್ಯಾಡ್ ನ್ಯೂಸ್ ಅಬಕಾರಿ ಇಲಾಖೆ ನೀಡಲಿದೆ.
ಆಗಸ್ಟ್ ಒಂದರಿಂದಲೇ ಪ್ರೀಮಿಯಂ ಮದ್ಯದ ದರವನ್ನು ಕಡಿಮೆ ಮತ್ತು ಮಧ್ಯಮ ವರ್ಗದವರು ಕುಡಿಯುವ ಮದ್ಯದ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಇನ್ನೂ ಅಧಿಕೃತ ಆದೇಶ ಆಗಿಲ್ಲ. ಈ ವಾರ ಅಥವಾ ಮುಂದಿನ ವಾರದಲ್ಲಿ ಹೊಸ ದರ ಏರಿಕೆ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
2500 ರಿಂದ 3000 ರೂ. ದರ ಇರುವ ಫುಲ್ ಬಾಟಲ್ ಸ್ಕಾಚ್ ದರ 1500 ರಿಂದ 1800 ರೂಪಾಯಿ ವರೆಗೆ ಇಳಿಕೆಯಾಗಲಿದೆ. ಬೇರೆ ಬೇರೆ ರಾಜ್ಯದಲ್ಲಿ ಪ್ರೀಮಿಯಂ ಸ್ಕಾಚ್ ಫುಲ್ ಬಾಟಲ್ ಗೆ 1000 ರೂ.ನಿಂದ 1500 ರೂಪಾಯಿ ವರೆಗೆ ಇದೆ. ಆದರೆ ನಮ್ಮ ರಾಜ್ಯದಲ್ಲಿ ದರ ದುಪ್ಪಟ್ಟು ಇರುವ ಕಾರಣ, ಸ್ಕಾಚ್ಗಳ ಮಾರಾಟ ಕಡಿಮೆ ಆಗುತ್ತಿದೆ. ಇದರಿಂದ ಶ್ರೀಮಂತ ಮದ್ಯಪ್ರಿಯರು ಅಕ್ಕಪಕ್ಕದ ರಾಜ್ಯಗಳ ಮಿಲ್ಟ್ರಿ ಕ್ಯಾಂಟೀನ್ಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪ್ರಿಮಿಯಮ್ ಮದ್ಯದ ದರವನ್ನು ಶೇ 40 ರಿಂದ 50 ರಷ್ಟು ಇಳಿಕೆ ಮಾಡಲು ಮುಂದಾಗಿದೆ.
ಬಡ ಮದ್ಯಪ್ರಿಯರು ಅಂದರೆ 100 ರಿಂದ 120 ರೂಪಾಯಿ ಬೆಲೆ ಇರುವ ಮದ್ಯದ ದರವನ್ನು ಕ್ವಾರ್ಟರ್ ಗೆ 20 ರಿಂದ 30 ರೂಪಾಯಿ, ಫುಲ್ ಬಾಟಲ್ ಮೇಲೆ 100 ರಿಂದ 150 ರೂಪಾಯಿ ವರೆಗೆ ಏರಿಕೆ ಆಗಲಿದೆ