Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಡಿಜಿಪಿ ರಾಮಚಂದ್ರ ರಾವ್ ಅವರು ಮಹಿಳೆಯೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ ಸೃಷ್ಟಿಸುತ್ತಿವೆ.
ಸರ್ಕಾರಿ ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲೇ ಡಿಜಿಪಿ ರಾಮಚಂದ್ರರಾವ್ ಮಹಿಳೆಯನ್ನು ಮುದ್ದಾಡ್ತಿರೋ ವಿಡಿಯೋ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿರಿಯ ಅಧಿಕಾರಿಯ ಈ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಇದೀಗ ಡಿಜಿಪಿ ಮತ್ತು ಮಹಿಳೆಯ ನಡುವೆ ನಡೆದಿದೆ ಎನ್ನಲಾದ ಖಾಸಗಿ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಲವ್ ಯೂ ಬಂಗಾರಿ, ಸೋ ಸ್ವೀಟ್… ದಿನಾಲೂ ನಿನ್ನ ನೋಡಬೇಕು, ಮುದ್ದು ಮಾಡಬೇಕು, ನಿನ್ನ ನೋಡಿದ್ಮೇಲೆ ನಿದ್ರೆನೇ ಬರ್ತಿಲ್ಲ, ನಿನ್ನ ಮಿಸ್ ಮಾಡ್ಕೊಳ್ತಿದ್ದೆ ಚಿನ್ನ… ಹೀಗೆ ಅತ್ಯಂತ ರೊಮ್ಯಾಂಟಿಕ್ ಮತ್ತು ಅಶ್ಲೀಲ ಪದಗಳು ಆಡಿಯೋದಲ್ಲಿ ಸೆರೆಯಾಗಿವೆ. ಈ ಧ್ವನಿ ಡಿಜಿಪಿ ರಾಮಚಂದ್ರ ರಾವ್ ಅವರದ್ದೇ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈಗಾಗಲೇ ರಾಸಲೀಲೆ ವಿಡಿಯೋ ವೈರಲ್ ಆದಾಗ ಪ್ರತಿಕ್ರಿಯಿಸಿದ್ದ ಡಿಜಿಪಿ ರಾಮಚಂದ್ರ ರಾವ್, ಇದು ನನ್ನ ತೇಜೋವಧೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ. ಆ ವಿಡಿಯೋ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಅವರು ದೂರು ದಾಖಲಿಸುವುದಾಗಿ ತಿಳಿಸಿದ್ದರು. ಆದರೆ, ಇದೀಗ ಆಡಿಯೋ ವೈರಲ್ ಆಗಿರುವುದರಿಂದ ಅವರ ವಾದದ ಮೇಲೆ ಅನುಮಾನಗಳು ಹೆಚ್ಚಾಗಿವೆ.
https://www.newsics.com/2026/01/20/what-will-rakshita-do-with-the-25-lakhs-she-won-on-bigg-boss/