Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಶೋ ಕನ್ನಡ ಬಿಗ್ಗೆಸ್ಟ್ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ. ಕರ್ನಾಟಕದ ಜನರೇ ವೋಟ್ ಮಾಡುವ ಮೂಲಕ ಬಿಗ್ ಬಾಸ್ ವಿನ್ನರ್ ನ ಆಯ್ಕೆ ಮಾಡುವ ಮೂಲಕ ಮತ್ತೊಂದು ಇತಿಹಾಸ ಬರೆದಿದ್ದಾರೆ. ಅಂತಿಮ ತೀರ್ಪಿನಲ್ಲಿ ಗಿಲ್ಲಿ ಬಿಗ್ ಬಾಸ್ ವಿನ್ನರ್ ಆದ್ರೆ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಮನೆಯಲ್ಲಿ ಪಟ ಪಟ ಅಂತ ಎಲ್ಲರ ಮನಗೆದ್ದ ಪಟಾಕಿ ಪೋರಿ ಅಂತಲೇ ಫೇಮಸ್ ಆಗಿರುವ ರಕ್ಷಿತಾ ರನ್ನರ್ ಆಪ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಕ್ಷಿತಾ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಕೊನೆಯ ಹಂತದಲ್ಲಿ ಬಿಗ್ ಬಾಸ್ ಟ್ರೋಫಿ ರಕ್ಷಿತಾ ತಪ್ಪಿದೆ.
ಬಿಗ್ ಬಾಸ್ ವಿನ್ನರ್ ಪಟ್ಟ ಸಿಗದಿದ್ರೂ, ರನ್ನರ್ ಅಪ್ ಆಗುವ ಮೂಲಕ ಕರ್ನಾಟಕದ ಕೋಟ್ಯಾಂತರ ಮನಸ್ಸುಗಳನ್ನು ರಕ್ಷಿತಾ ಶೆಟ್ಟಿ ಗೆದ್ದಿದ್ದಾರೆ. ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಭರ್ಜರಿ ಉಡುಗೊರೆಯೇ ಸಿಕ್ಕಿದೆ.
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್‌ನಿಂದ ಪಡೆದ 25 ಲಕ್ಷ ರೂಪಾಯಿ ಬಹುಮಾನದ ಹಣದಲ್ಲಿ 20 ಹಸುಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದಾರೆ. ಹೆಚ್ಚುವರಿ 5 ಲಕ್ಷ ರೂಪಾಯಿಗಳನ್ನು ಹಸುಗಳ ಆರೈಕೆ, ಆಹಾರ ಮತ್ತು ನಿರ್ವಹಣೆಗೆ ಮೀಸಲಿಡುವುದಾಗಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧದ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಮೂರು ತಿಂಗಳ ಕಾಲ ಮನೆಯಲ್ಲಿ ಕಳೆದ ನಂತರ ಆ ಮನೆ ಕೇವಲ ಮನೆಯಾಗಿರಲಿಲ್ಲ, ಅದೊಂದು ಕುಟುಂಬವಾಯಿತು ಎಂದು ಅವರು ವಿವರಿಸಿದರು. ಮನೆಯಲ್ಲಿನ ಸುಖ-ದುಃಖಗಳು, ನಗು, ಹಬ್ಬಗಳು ಮತ್ತು ವಿಭಿನ್ನ ಭಾವನೆಗಳು ಅವರನ್ನು ಅಲ್ಲಿನ ಸದಸ್ಯರೊಂದಿಗೆ ಬಲವಾಗಿ ಬಂಧಿಸಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ರಾತ್ರಿ ಮಲಗಲು ಕೂಡ ಒದ್ದಾಡಿದ್ದೇನೆ ಎಂದು ಹೇಳಿದ್ದಾರೆ.
https://www.newsics.com/2026/01/20/eat-bananas-at-this-time-see-all-the-benefits/