Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗಂಗಾವತಿ : ಇಂಗ್ಲೆಂಡ್ ನ ಹುಡುಗಿಯೊಬ್ಬಳನ್ನು ಪ್ರೀತಿಸಿ ಕೇವಲ ಎಂಟು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಗಂಗಾವತಿಯ ಯುವಕ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ ಅಂಜನಾದ್ರಿ ಸಮೀಪ ಇರುವ ಸಣಾಪುರ ಗ್ರಾಮದ ಗೆಸ್ಟ್ ಹೌಸ್ ಮಾಲೀಕ ಮುರಳಿ ಮೃತರು. ಸಣಾಪುರದಿಂದ ಮೂರ್ನಾಲ್ಕು ಕಿಲೋಮೀಟರ್ ಅಂತರವಿರುವ ಬಸಾಪುರದಲ್ಲಿ ಗೆಸ್ಟ್ಹೌಸ್ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದರು.
ಕಳೆದ ಮೂರು ತಿಂಗಳ ಹಿಂದೆ ಹೊಟ್ಟೆನೋವು ಉಲ್ಬಣಗೊಂಡಾಗ ಬೆಂಗಳೂರಿಗೆ ತೆರಳಿ ಚಿಕಿತ್ಸೆಗೆ ತಜ್ಞ ವೈದ್ಯರ ಬಳಿಗೆ ಹೋದಾಗ ಆತನ ಹೊಟ್ಟೆಯಲ್ಲಿ ಅಲ್ಸರ್ ಬೆಳೆದು, ಗಡ್ಡೆಯಾಗಿ ಅದು ಕ್ಯಾನ್ಸರ್ ರೂಪಕ್ಕೆ ತಿರುಗಿದೆ ಎಂದು ವೈದ್ಯರು ಕೈ ಚೆಲ್ಲಿದ್ದರು ಎಂಬುದು ಗೊತ್ತಾಗಿತ್ತು ಎಂದು ಸ್ನೇಹಿತರು ಹೇಳಿದರು.
ಸಿನಿಮಾ ಕ್ಷೇತ್ರದಲ್ಲಿ ಕಥೆ ಬರೆಯುವ ದೂರದ ಇಂಗ್ಲೆಂಡಿನ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಬ ಲಂಡನ್ ಯುವತಿಯ ಆಕಸ್ಮಿಕ ಭೇಟಿ ಸ್ನೇಹಕ್ಕೆ ತಿರುಗಿತ್ತು. ಬಳಿಕ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಕಳೆದ 2025ರ ಮೇ 9ರಂದು ಬಸಾಪುರದಲ್ಲಿರುವ ತಮ್ಮ ಗೆಸ್ಟ್ಹೌಸ್ನಲ್ಲಿ ಅದ್ಧೂರಿಯಾಗಿ ಮುರಳಿ ಈ ಕನ್ಯೆಯನ್ನು ಮದುವೆಯಾಗಿದ್ದರು. L.
ನಟ ಶ್ರೀನಗರ ಕಿಟ್ಟಿ-ಮೋಹಕ ತಾರೆ ರಮ್ಯಾ ನಟಿಸಿರುವ `ಸಂಜು ವೆಡ್ಸ್ ಗೀತಾ’ ಚಿತ್ರದ ಮಾದರಿಯಲ್ಲಿ, ತಮ್ಮ ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಉದ್ದೇಶಕ್ಕೆ ಮುರಳಿ `ಇಂಡಿಯಾ ವೆಡ್ಸ್ ಲಂಡನ್’ ಎಂಬ ಕಿರು ಚಿತ್ರವನ್ನು ತಯಾರಿಸಿದ್ದರು.
https://www.newsics.com/2026/01/20/dgp-ramachandras-obscene-fake-audio-with-woman-goes-viral/