Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗಂಡನ ಮೇಲಿನ ಸಿಟ್ಟು, ಆಕ್ರೋಶ, ಆರೋಪ ಎಲ್ಲವನ್ನೂ ಬೀದಿಯಲ್ಲೇ ತೀರಿಸಿಕೊಂಡಿದ್ದಾಳೆ. ಗಂಡನ ಹಿಂದೆ ಬೈಕ್‌ನಲ್ಲಿ ತೆರಳುತ್ತಿರುವ ಹೆಂಡತಿ, ಕಿತ್ತಾಡಿದ್ದಾಳೆ, ಗಂಡನಿಗೆ ಹಿಗ್ಗಾ ಮುಗ್ಗಾ ಬಾರಿಸಿದ್ದಾಳೆ. ಇವೆಲ್ಲವೂ ಚಲಿಸುತ್ತಿರುವ ಬೈಕ್‌ನಲ್ಲೇ ನಡೆದಿದೆ. ಈ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ದಲ್ಲಿ ಬ್ಯೂಸಿ ರಸ್ತೆಯಲ್ಲಿ ಬೈಕ್‌ನಲ್ಲಿ ಗಂಡ-ಹೆಂಡತಿ ಸಾಗಿದ್ದಾರೆ. ಇದರ ನಡುವೆ ಹೆಂಡತಿ ಹಾಗೂ ಗಂಡನ ನಡುವೆ ವಾಗ್ವಾದ ನಡೆಯುತ್ತಲೇ ಇದೆ. ಒಂದು ಹಂತದಲ್ಲಿ ವಾಗ್ವಾದ ತೀವ್ರ ಸ್ಪರೂಪಕ್ಕೆ ತೆರಳಿದೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಹೆಂಡತಿ, ಚಲಿಸುತ್ತಿರುವ ಬೈಕ್‌ನಲ್ಲೇ ಗಂಡನ ಮೇಲೆ ಬಾರಿಸಿದ್ದಾಳೆ. ತಲೆ ಜಜ್ಜಿದ್ದಾಳೆ. ಹಿಂಬದಿಯಿಂದ ಗಂಡನ ಮೇಲೆ ಸತತವಾಗಿ ಎಗರಿ ಬಿದ್ದಿದ್ದಾಳೆ, ಮುಖ, ತಲೆ ನೋಡದೆ ಹೊಡೆದಿದ್ದಾಳೆ.
ಹೆಂಡತಿ ಕೊನೆಯಲ್ಲಿ ಗಂಡನ ಕೂದಲು ಹಿಡಿದು ಹಾಕಿದ ಪಟ್ಟಿಗೆ ಗಂಡ ಬೈಕ್ ನಿಲ್ಲಿಸಬೇಕಾಯಿತು. ಅಲ್ಲೀವರೆಗಿನ ಜಗಳದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಳಿಕ ಇವರ ಜಗಳ ಏನಾಯಿತು ಅನ್ನೋ ಮಾಹಿತಿ ಲಭ್ಯವಿಲ್ಲ. .
https://www.instagram.com/reel/DTcO_hhiLU7/?igsh=ZzZqZDFpcHBjazlt