Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಸೀಸನ್‌ನ ವಿನ್ನರ್ ಆಗಿ ಗೆಲುವಿನ ನಗೆ ಬೀರಿದ್ದಾರೆ ಪ್ರತಿಭಾವಂತ ಗಿಲ್ಲಿ ನಟ. ಇವರಿಗೆ ಬಹುಮಾನವಾಗಿ 50 ಲಕ್ಷ ರೂಪಾಯಿ ಲಭಿಸಿದೆ. ಅಷ್ಟೇ ಅಲ್ಲ.. ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಪ್ರೀತಿಯಿಂದ 10 ಲಕ್ಷ ರೂಪಾಯಿ ಬಹುಮಾನವಾಗಿ ನೀಡಿದ್ದಾರಟಾಪ್ ಆರು ಸ್ಪರ್ಧಿಗಳ ಪೈಕಿ ಟಾಪ್ 2 ಸ್ಥಾನಕ್ಕೆ ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿ ಇದ್ದರು. ಈ ಪೈಕಿ ಕಿಚ್ಚ ಸುದೀಪ್ ಅವರು ಗಿಲ್ಲಿ ಅವರ ಹೆಸರನ್ನು ಜೋರಾಗಿ ಕೂಗುವ ಮೂಲಕ ವಿಜೇತರು ಯಾರೆಂದು ಘೋಷಿಸಿದ್ದಾರೆ.
ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಎಂಟ್ರಿ ಕೊಟ್ಟು, ತಮ್ಮ ಖಡಕ್ ಡೈಲಾಗ್‌ಗಳ ಮೂಲಕವೇ ಎಲ್ಲರ ಗಮನ ಸೆಳೆದರು. ಗಿಲ್ಲಿ ಅವರ ಮಾತು, ತಮಾಷೆ ಎಲ್ಲರಿಗೂ ಇಷ್ಟವಾಗಿತ್ತು. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಗಿಲ್ಲಿ ನಟನ ಪರ ಅಬ್ಬರದ ಪ್ರಚಾರ ನಡೆದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಈಗ ಬಿಗ್‌ಬಾಸ್ ಟ್ರೋಫಿ ಗೆದ್ದುಕೊಂಡಿದ್ದಾರೆ.
ಪ್ರತಿ ಸೀಸನ್ನಂತೆಯೇ ಈ ಬಾರಿಯೂ ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಪ್ರೀತಿಯಿಂದ ₹10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.
ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಸಂದರ್ಭೋಚಿತ ಕಾಮಿಡಿ, ಪಂಚಿಂಗ್ ಲೈನ್ಸ್ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ತಮ್ಮ ಕಾಮಿಡಿಯಲ್ಲಿ ಸಿಲ್ಲಿ ಜೋಕ್ಸ್‌ನ ಗಿಲ್ಲಿ ಎಂದೂ ಮಿಕ್ಸ್ ಮಾಡಲಿಲ್ಲ. ಡಬಲ್ ಮೀನಿಂಗ್ ಅಥವಾ ಅಶ್ಲೀಲತೆಯನ್ನ ಸೋಕಿಸಲೂ ಇಲ್ಲ. ಇಡೀ ಫ್ಯಾಮಿಲಿ ಕೂತು.. ಎಲ್ಲರೂ ಹೊಟ್ಟೆ ತುಂಬಾ ನಗುವಂತೆ ಮಾಡಿದವರು ಗಿಲ್ಲಿ ನಟ. ಇದೇ ಕಾರಣಕ್ಕೆ ‘ಗಿಲ್ಲಿ ಗೆಲ್ಲಬೇಕು’ ಅಂತ ಬಹುತೇಕರು ಬಯಸಿದ್ದರು. ವೀಕ್ಷಕರು ಅಂದುಕೊಂಡಂತೆ ಗಿಲ್ಲಿ ನಟ ವಿಜಯಪತಾಕೆ ಹಾರಿಸಿದ್ದಾರೆ.