Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಫಿನಾಲೆ ಮುಗಿಯೋ ಟೈಮ್ನಲ್ಲಿ ಬಿಡದಿಯ ಬಿಗ್ಬಾಸ್ ಹೌಸ್ ಹತ್ತಿರ ದೊಡ್ಡ ಹೈಡ್ರಾಮಾನೇ ನಡೆದಿದೆ. . ಪರಿಸ್ಥಿತಿ ಎಷ್ಟರ ಮಟ್ಟಿಗೆ ಹೋಗಿದೆ ಅಂದ್ರೆ, ಜನರನ್ನು ಕಂಟ್ರೋಲ್ ಮಾಡಲು ಪೊಲೀಸರು ಲಾಠಿ ಚಾರ್ಜ್ ಮಾಡೋ ಪರಿಸ್ಥಿತಿ ಬಂದಿದೆ.
ಸಾಮಾನ್ಯವಾಗಿ ಫಿನಾಲೆ ಶೂಟಿಂಗ್ ಮುಗಿದ ಮೇಲೆ ವಿನ್ನರ್ ಮತ್ತು ರನ್ನರ್ ಅಪ್ಗಳು ಹೊರಗಡೆ ಬಂದು ಫ್ಯಾನ್ಸ್ಗೆ ಕೈ ಬೀಸ್ತಾರೆ. ಆದ್ರೆ ಈ ಸಲ ಹಾಗಿಲ್ಲ. ಹೊರಗಡೆ ಪರಿಸ್ಥಿತಿ ಉದ್ವಿಗ್ನವಾಗಿರೋದ್ರಿಂದ, ಬಿಗ್ಬಾಸ್ ವಿನ್ನರ್ ಅವರನ್ನ ಇವತ್ತು ರಾತ್ರಿ ಯಾವುದೇ ಕಾರಣಕ್ಕೂ ಹೊರಗಡೆ ಕಳಿಸಬೇಡಿ ಎಂದು ರಾಮನಗರ ಎಸ್ಪಿ, ಬಿಗ್ಬಾಸ್ ಆಡಳಿತ ಮಂಡಳಿಗೆ ಕಡಕ್ ಸೂಚನೆ ಕೊಟ್ಟಿದ್ದಾರೆ. ಇನ್ನೂ ಗಿಲ್ಲಿ ಅವರನ್ನ ನೋಡೋಕೆ ಫ್ಯಾನ್ಸ್ ಕಾಯ್ತಿದ್ರೂ, ಸೇಫ್ಟಿ ದೃಷ್ಟಿಯಿಂದ ಗಿಲ್ಲಿ ರಾತ್ರಿ ಬಿಗ್ಬಾಸ್ ಮನೆಯಲ್ಲೇ ಉಳ್ಕೊಬೇಕಾಗಿದೆ.
ಇದಾಗಲೇ ಅಭಿಮಾನಿಗಳ ಅತಿರೇಕ ಪೊಲೀಸರಿಗೆ ತಲೆನೋವಾಗಿ ಹೋಗಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) 50ಕ್ಕೂ ಹೆಚ್ಚು ಪೊಲಿಸರನ್ನು ಬಿಗ್ಬಾಸ್ ಮನೆಯ ಹೊರಗೆ ನಿಯೋಜಿಸಿದೆ. ಇದರಿಂದ ಇಂದು ಬೆಳಿಗ್ಗೆಯವರೆಗೂ ವಿನ್ ಆದವರನ್ನು ಹೊರಕ್ಕೆ ತರದೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.