Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬಿಗ್ ಬಾಸ್ ಕನ್ನಡ ಸೀಸನ್ 12 ಅಂತ್ಯವಾಗಲು ಕೇವಲ ಒಂದೇ ಒಂದು ದಿನ ಬಾಕಿ ಇದೆ. ಈ ಮಧ್ಯೆ ಬಿಗ್ ಬಾಸ್ ವೀಕ್ಷಕರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಬಿಗ್ ಬಾಸ್ ಲೈವ್ ಟೆಲಿಕಾಸ್ಟ್ ನಿಲ್ಲಿಸಲಾಗಿದೆ.
ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಬಿಗ್ ಬಾಸ್ ಲೈವ್, ಈ ಸೀಸನ್‌ನ ಪ್ರಮುಖ ಆಕರ್ಷಣೆಯಾಗಿತ್ತು. ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆ, ಟಾಸ್ಕ್‌ಗಳ ಕ್ಷಣಗಳನ್ನುಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಲೈವ್ ಮೂಲಕ ವೀಕ್ಷಿಸುತ್ತಿದ್ದರು. ಆದರೆ ಇದೀಗ ಅಧಿಕೃತವಾಗಿ ಲೈವ್ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಬಿಗ್ ಬಾಸ್ ಸೀಸನ್ 12 ತನ್ನ 108 ದಿನಗಳ ಪ್ರಯಾಣವನ್ನು ಲೈವ್ ಪ್ರಸಾರ ಮೂಲಕ ವಿಶೇಷಗೊಳಿಸಿತ್ತು . ಮೊದಲ ದಿನದಿಂದಲೂ ಮನೆಯಲ್ಲಿ ನಡೆಯುವ ವಿಷಯವನ್ನು ವೀಕ್ಷಕರಿಗೆ ತಕ್ಷಣ ತಲುಪಿಸುವಲ್ಲಿ ಲೈವ್ ಫೀಡ್ ಮಹತ್ವದ ಪಾತ್ರವಹಿಸಿತ್ತು. ವೀಕ್ಷಕರು ಮನೆಯಲ್ಲಿ ನಡೆಯುವ ಮಾತುಕತೆಗಳಿಂದ ಹಿಡಿದು ಎಲ್ಲಾ ಜಗಳ, ಕಾಮಿಡಿ, ಹೀಗೆ ಮುಂತಾದವುಗಳನ್ನು ನಿರಂತರವಾಗಿ ವೀಕ್ಷಿಸುತಿದ್ರು . ಆದರೆ ಇದೀಗ ಕೊನೆ ವಾರದಂದು ಬಿಗ್ ಬಾಸ್ ಲೈವ್ ಅನ್ನು ನಿಲ್ಲಿಸಲಾಗಿದೆ.
ಲೈವ್ ಸ್ಟಾಪ್ ಮಾಡಿರುವುದರ ಕಾರಣಗಳ ಬಗ್ಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಫಿನಾಲೆ ಹತ್ತಿರವಾಗಿರುವುದರಿಂದ ಸ್ಪರ್ಧಿಗಳ ಕೊನೆ ಕ್ಷಣದ ಮಾಹಿತಿಗಳು ಹೊರಗೆ ಸೋರಿಕೆ ಆಗದಂತೆ ತಡೆಯಲು ಬಿಗ್ ಬಾಸ್ ಈ ಕ್ರಮ ತೆಗೆದುಕೊಂಡಿರಬಹುದು ಎಂದು ಜನ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
https://www.instagram.com/reel/DTiqCttiFCJ/?igsh=a3dwZTk2MWU3bjFy