Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಈ ಬಾರಿಯ ಗಣರಾಜ್ಯೋತ್ಸವಕ್ಕೆ ಇಬ್ಬರು ಅತಿಥಿಗಳು: ಏನಿದರ ಮರ್ಮ? ಮೋದಿ ಲೆಕ್ಕಾಚಾರವೇನು?
ದೇಶಪ್ರಮುಖವಿದೇಶ

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಇಬ್ಬರು ಅತಿಥಿಗಳು: ಏನಿದರ ಮರ್ಮ? ಮೋದಿ ಲೆಕ್ಕಾಚಾರವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ಭಾರತದ 77ನೇ ಗಣರಾಜ್ಯೋತ್ಸವಕ್ಕೆ ಇಬ್ಬರು ಘಟಾನುಘಟಿಗಳು ಮುಖ್ಯ ಅತಿಥಿಗಳಾಗಿ ಬರ್ತಿದ್ದಾರೆ.

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಜನವರಿ 26ರಂದು ಕರ್ತವ್ಯ ಪಥದಲ್ಲಿ ಕಂಗೊಳಿಸಲಿದ್ದಾರೆ.

ಮೊದಲನೆಯದಾಗಿ, ಆಂಟೋನಿಯೊ ಕೋಸ್ಟಾ ಅವರಿಗೆ ಭಾರತದ ನಂಟು ಇದೆ. ಇವರು ಮೂಲತಃ ನಮ್ಮ ಗೋವಾದವರು!. ಇವರ ತಂದೆ ಗೋವಾದವರು). ಭಾರತೀಯ ಮೂಲದ ವ್ಯಕ್ತಿ ಯುರೋಪ್‌ನ ಉನ್ನತ ಹುದ್ದೆಯಲ್ಲಿದ್ದಾರೆ ಅನ್ನೋದು ನಮಗೆ ಹೆಮ್ಮೆ. ಇನ್ನು ಉರ್ಸುಲಾ ಅವರು ಯುರೋಪ್ ಒಕ್ಕೂಟದ ಪವರ್‌ಫುಲ್ ಲೇಡಿ. ಇವರಿಬ್ಬರನ್ನೂ ಒಟ್ಟಿಗೆ ಅಹ್ವಾನಿಸುವ ಮೂಲಕ ಭಾರತ, “ನಮಗೆ ಯುರೋಪ್ ಜೊತೆಗಿನ ಸಂಬಂಧ ಎಷ್ಟು ಮುಖ್ಯ” ಎನ್ನುವುದನ್ನು ಜಗತ್ತಿಗೆ ಸಾರಿದೆ.

ಚೀನಾಕ್ಕೆ ಟಕ್ಕರ್ ಕೊಡಲು ಯುರೋಪ್ ಜತೆ ದೋಸ್ತಿ ಮಾಡಿಕೊಳ್ಳೋದು ಭಾರತಕ್ಕೆ ಈಗ ಅನಿವಾರ್ಯ ಮತ್ತು ಲಾಭದಾಯಕ.

ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ಮುಕ್ತ ವ್ಯಾಪಾರ ಒಪ್ಪಂದ (Free Trade Agreement – FTA) ಮಾತುಕತೆ ವರ್ಷಗಳಿಂದ ನಡೀತಾನೇ ಇದೆ. ಟ್ಯಾಕ್ಸ್ ವಿಚಾರ, ವೀಸಾ ವಿಚಾರದಲ್ಲಿ ಕಿರಿಕ್ ಆಗಿ ಅದು ಫೈನಲ್ ಆಗಿರಲಿಲ್ಲ. ಈಗ ಈ ನಾಯಕರು ಬರ್ತಿರೋದ್ರಿಂದ ಈ ‘ಮೆಗಾ ಡೀಲ್’ ಫೈನಲ್ ಆಗುವ ಸಾಧ್ಯತೆ ದಟ್ಟವಾಗಿದೆ. ಜನವರಿ 27ರಂದು ನಡೆಯುವ 16ನೇ ಶೃಂಗಸಭೆಯಲ್ಲಿ (Summit) ಇದಕ್ಕೆ ಅಂತಿಮ ಮುದ್ರೆ ಬೀಳಬಹುದು.

ಬರೀ ವ್ಯಾಪಾರ ಅಷ್ಟೇ ಅಲ್ಲ, ಯುರೋಪ್‌ನ ಹೈ-ಟೆಕ್ನಾಲಜಿ ಮತ್ತು ಗ್ರೀನ್ ಎನರ್ಜಿ (Green Energy) ತಂತ್ರಜ್ಞಾನ ಭಾರತಕ್ಕೆ ಬರುವುದಕ್ಕೆ ದಾರಿ ಮಾಡಿಕೊಡಬಹುದು. ಜರ್ಮನಿ, ಫ್ರಾನ್ಸ್‌ನಂತಹ ದೇಶಗಳು ಭಾರತದಲ್ಲಿ ಸೋಲಾರ್, ವಿಂಡ್ ಎನರ್ಜಿ ಮತ್ತು ಗ್ರೀನ್ ಹೈಡ್ರೋಜನ್ ವಲಯದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲು ಕಾಯ್ತಿವೆ. ಈ ಭೇಟಿ ಆ ಹೂಡಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಂತೆ.

ಭಾರತದ ಐಟಿ ಕಂಪನಿಗಳು ಯುರೋಪ್‌ನಲ್ಲಿ ದೊಡ್ಡ ಬ್ಯುಸಿನೆಸ್ ಹೊಂದಿವೆ. ಈ ಭೇಟಿಯಲ್ಲಿ ವೃತ್ತಿಪರರ ವೀಸಾ ನಿಯಮಗಳನ್ನು ಸಡಿಲಿಸುವ ಬಗ್ಗೆ ಚರ್ಚೆ ಆಗಬಹುದು. ನಮ್ಮ ಟೆಕ್ಕಿಗಳು ಮತ್ತು ಉನ್ನತ ವ್ಯಾಸಂಗಕ್ಕೆ ಹೋಗೋ ವಿದ್ಯಾರ್ಥಿಗಳಿಗೆ ಯುರೋಪ್‌ಗೆ ಹೋಗೋದು ಇನ್ನಷ್ಟು ಸುಲಭ ಆಗಬಹುದು.

ಈ ಗಣರಾಜ್ಯೋತ್ಸವವು ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿಲ್ಲ, ಭಾರತದ ಆರ್ಥಿಕತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ‘ಟರ್ನಿಂಗ್ ಪಾಯಿಂಟ್’ ಆಗಲಿದೆ.

ವಾಕಿ-ಟಾಕಿ ಅನಧಿಕೃತ ಮಾರಾಟ: 13 ಇ-ಕಾಮರ್ಸ್ ಸೈಟ್ ಗಳಿಗೆ ಬಿತ್ತು ತಲಾ 10 ಲಕ್ಷ ರೂ. ದಂಡ

TAGGED:What is the real purpose behind the selection of Republic Day guests?
Share This Article
Facebook Twitter Copy Link Print
Previous Article ವಾಕಿ-ಟಾಕಿ ಅನಧಿಕೃತ ಮಾರಾಟ: 13 ಇ-ಕಾಮರ್ಸ್ ಸೈಟ್ ಗಳಿಗೆ ಬಿತ್ತು ತಲಾ 10 ಲಕ್ಷ ರೂ. ದಂಡ
Next Article ಬಿಗ್ ಬಾಸ್ ಫೈನಲ್‌ಗೆ ಒಂದೇ ದಿನ ಇರುವಾಗಲೇ ಮೇಜರ್ ಚೇಂಜ್

Popular Posts

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

You Might Also Like

ಕರ್ನಾಟಕಪ್ರಮುಖ

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read
ಕರ್ನಾಟಕಪ್ರಮುಖ

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read
ಪ್ರಮುಖ

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?