Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಚಿನ್ನ ಕಳ್ಳತನ ಕೇಸ್ ನಲ್ಲಿ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಈ ಕೇಸ್ ನಲ್ಲಿ ಈಗ ದೇವಾಲಯದ ಪ್ರಧಾನ ಅರ್ಚಕ ಕಂಡರಾರು ರಾಜೀವರು ರನ್ನು ಬಂಧಿಸಲಾಗಿದೆ
ದೇವಸ್ಥಾನದ ‘ಶ್ರೀಕೋವಿಲ್’ನ ಬಾಗಿಲ ಚೌಕಟ್ಟಿನ ಚಿನ್ನದ ತೂಕ ಕಡಿಮೆಯಾಗಿರುವ ಪ್ರಕರಣದಲ್ಲಿ ಕಂಡರಾರು ರಾಜೀವರು ಈಗಾಗಲೇ ಬಂಧನದಲ್ಲಿದ್ದು, ಸದ್ಯ ಅವರು ತಿರುವನಂತಪುರದ ವಿಶೇಷ ಉಪ ಕಾರಾಗೃಹದಲ್ಲಿದ್ದಾರೆ.
ಕೊಲ್ಲಂ ವಿಜಿಲೆನ್ಸ್ ಕೋರ್ಟ್‌ನಿಂದ ಅನುಮತಿ ಪಡೆದುಕೊಂಡ ಎಸ್‌ಐಟಿ ತಂಡವು ಗುರುವಾರ ಜೈಲಿಗೆ ತೆರಳಿ, ಎರಡನೆಯ ಪ್ರಕರಣವಾದ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ ಲೇಪಿಸಿದ್ದ ಚಿನ್ನ ಕಳವು ಪ್ರಕರಣದಲ್ಲಿ ಕಂಡರಾರು ಅವರ ಬಂಧನವನ್ನು ದಾಖಲಿಸಿತು. ತನಿಖಾ ತಂಡವು ರಾಜೀವರು ಅವರನ್ನು ಕಸ್ಟಡಿಗೆ ಪಡೆಯಲು ಶೀಘ್ರದಲ್ಲೇ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ.