Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭಾರತ ಚೀನಾ ಯುದ್ಧದ ವೇಳೆ 600 ಕೆಜಿ ಚಿನ್ನ,‌ 3 ಖಾಸಗಿ‌ ವಿಮಾನ ದಾನ ಮಾಡಿದ್ದ ಮಹಾರಾಣಿ ಇನ್ನಿಲ್ಲ
ದೇಶಪ್ರಮುಖವಿದೇಶ

ಭಾರತ ಚೀನಾ ಯುದ್ಧದ ವೇಳೆ 600 ಕೆಜಿ ಚಿನ್ನ,‌ 3 ಖಾಸಗಿ‌ ವಿಮಾನ ದಾನ ಮಾಡಿದ್ದ ಮಹಾರಾಣಿ ಇನ್ನಿಲ್ಲ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪಾಟ್ನಾ: 1962ರ ಭಾರತ – ಚೀನಾ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬರೋಬ್ಬರಿ 600 ಕೆಜಿ ಚಿನ್ನವನ್ನು ದಾನವಾಗಿ ನೀಡಿದ್ದ, ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ‘ಕಾಮಸುಂದರಿ ದೇವಿ’ (93) ಅವರು ನಿಧನರಾದರು.

ಈ‌ ಮೂಲಕ ಅಪ್ರತಿಮ ದೇಶಭಕ್ತಿಗೆ ಹೆಸರಾಗಿದ್ದ ದರ್ಭಾಂಗ ರಾಜಮನೆತನದ ಕೊಂಡಿಯೊಂದು ಕಳಚಿದೆ.

ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬಿಹಾರದ ದರ್ಭಾಂಗದಲ್ಲಿರುವ ತಮ್ಮ ಐತಿಹಾಸಿಕ ನಿವಾಸವಾದ ‘ಕಲ್ಯಾಣಿ ನಿವಾಸ’ದಲ್ಲಿ ಸೋಮವಾರ (ಜ.12) ಕೊನೆಯುಸಿರೆಳೆದರು. ಅವರ ನಿಧನದೊಂದಿಗೆ ಮಿಥಿಲಾಂಚಲ ಭಾಗದ ಗೌರವಾನ್ವಿತ ರಾಜಮನೆತನದ ಯುಗ ಅಂತ್ಯಗೊಂಡಂತಾಗಿದೆ.
ಮಹಾರಾಜ ಕಾಮೇಶ್ವರ್ ಸಿಂಗ್ ಅವರ ಮೂರನೇ ಪತ್ನಿಯಾಗಿದ್ದ ಮಹಾರಾಣಿ ಕಾಮಸುಂದರಿ ದೇವಿ ಅವರು 1932ರ ಅಕ್ಟೋಬರ್ 22 ರಂದು ಜನಿಸಿದರು. ಕೇವಲ 8ನೇ ವಯಸ್ಸಿನಲ್ಲಿ ವಿವಾಹವಾಗಿದ್ದ ಅವರು, 1962ರಲ್ಲಿ ಪತಿ ಮಹಾರಾಜ ಕಾಮೇಶ್ವರ್ ಸಿಂಗ್ ನಿಧನರಾದ ನಂತರ ಸುಮಾರು 64 ವರ್ಷ ಕಾಲ ಒಂಟಿಯಾಗಿಯೇ (ವಿಧವೆಯಾಗಿ) ಜೀವನ ನಡೆಸಿದರು. ಮಹಾರಾಜರಿಗೆ ಮೂವರು ಪತ್ನಿಯರಿದ್ದರೂ ಮಕ್ಕಳಿರಲಿಲ್ಲ.
ಸವಲತ್ತುಗಳಿಗಿಂತ ಕರ್ತವ್ಯಕ್ಕೆ ಹೆಚ್ಚು ಒತ್ತು ನೀಡಿದ್ದ ಮಹಾರಾಣಿ, ತಮ್ಮ ಸರಳತೆ ಮತ್ತು ಸೇವಾ ಮನೋಭಾವದಿಂದ ಜನಮಾನಸದಲ್ಲಿ ನೆಲೆಸಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ದರ್ಭಾಂಗ ಮತ್ತು ಮಿಥಿಲಾಂಚಲ ಭಾಗದಲ್ಲಿ ಶೋಕ ಮಡುಗಟ್ಟಿತ್ತು.
ಸಂಪ್ರದಾಯದಂತೆ ದರ್ಭಾಂಗ ರಾಜ್‌ನ ಖಾಸಗಿ ಸ್ಮಶಾನವಾದ ಮಧಮೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾರಾಣಿಯವರ ಅಂತ್ಯಕ್ರಿಯೆ ನೆರವೇರಿತು. ಅವರಿಗೆ ಸಂಬಂಧದಲ್ಲಿ ಮರಿಮೊಮ್ಮಗನಾದ ರತ್ನೇಶ್ವರ ಸಿಂಗ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ದರ್ಭಾಂಗ ರಾಜಮನೆತನವು ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಅದಕ್ಕೆ ಪ್ರಮುಖ ಕಾರಣ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಅವರು ತೋರಿದ ದೇಶಪ್ರೇಮ. ಅಂದು ಭಾರತ ಸರ್ಕಾರ ಯುದ್ಧದ ವೆಚ್ಚಕ್ಕಾಗಿ ನೆರವು ನೀಡುವಂತೆ ಮನವಿ ಮಾಡಿದಾಗ, ಅದಕ್ಕೆ ಮೊದಲು ಸ್ಪಂದಿಸಿದ್ದು ಇದೇ ರಾಜಮನೆತನ.
ದರ್ಭಾಂಗದ ಇಂದ್ರಭವನ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ, ಮಹಾರಾಣಿಯ ಕುಟುಂಬವು ದೇಶದ ರಕ್ಷಣಾ ನಿಧಿಗೆ ಸುಮಾರು 15 ಮಣ (ಅಂದಾಜು 600 ಕೆಜಿ) ಚಿನ್ನವನ್ನು ದಾನವಾಗಿ ನೀಡಿತ್ತು. ಇದು ಸ್ವತಂತ್ರ ಭಾರತಕ್ಕೆ ರಾಜಮನೆತನವೊಂದು ನೀಡಿದ ಅತಿದೊಡ್ಡ ಕೊಡುಗೆಗಳಲ್ಲಿ ಒಂದು. ಇತಿಹಾಸದಲ್ಲಿ ಇದು ಅಚ್ಚಳಿಯದ ದಾಖಲೆಯಾಗಿ ಇಂದಿಗೂ ಉಳಿದಿದೆ.
ಅಷ್ಟೇ ಅಲ್ಲ, ತಮ್ಮಲ್ಲಿದ್ದ ಮೂರು ಖಾಸಗಿ ವಿಮಾನಗಳನ್ನು ಮತ್ತು 90 ಎಕರೆ ವಿಸ್ತೀರ್ಣದ ಏರ್‌ಸ್ಟ್ರಿಪ್ (ವಿಮಾನ ನಿಲ್ದಾಣದ ಜಾಗ) ನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಅಂದು ಅವರು ನೀಡಿದ ಆ ಜಾಗವೇ ಇಂದು ‘ದರ್ಭಾಂಗ ವಿಮಾನ ನಿಲ್ದಾಣ’ವಾಗಿ ಅಭಿವೃದ್ಧಿಗೊಂಡಿದೆ ಎಂಬುದು ಗಮನಾರ್ಹ.
ಕೇವಲ ಯುದ್ಧದ ಸಮಯದಲ್ಲಷ್ಟೇ ಅಲ್ಲ, ಶಿಕ್ಷಣ ಮತ್ತು ಅಭಿವೃದ್ಧಿಯ ವಿಷಯದಲ್ಲೂ ಈ ರಾಜಮನೆತನ ಸದಾ ಮುಂದಿತ್ತು. ಪ್ರಸಿದ್ಧ ‘ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯ’ವು ರಾಜಮನೆತನದ ಆವರಣದಲ್ಲೇ ಕಾರ್ಯನಿರ್ವಹಿಸುತ್ತಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು), ಕಲ್ಕತ್ತಾ ವಿವಿ, ಅಲಿಘರ್ ಮುಸ್ಲಿಂ ವಿವಿ ಮತ್ತು ಪಾಟ್ನಾ ವಿಶ್ವವಿದ್ಯಾಲಯಗಳಿಗೆ ಈ ಕುಟುಂಬ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಿದೆ. ದರ್ಭಾಂಗ ಮೆಡಿಕಲ್ ಕಾಲೇಜು ಕೂಡ ಇವರ ಕೊಡುಗೆಯಾಗಿದೆ.
ಸಕ್ರಿ, ಲೋಹತ್, ರೈಯಮ್ ಮತ್ತು ಹಸನ್ಪುರದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲು ಈ ಮನೆತನ ಬೆಂಬಲ ನೀಡಿತ್ತು. ಪಾಂಡೌಲ್‌ನಲ್ಲಿ ಸ್ಪಿನ್ನಿಂಗ್ ಮಿಲ್, ಹಯಾಘಾಟ್‌ನಲ್ಲಿ ಅಶೋಕ್ ಪೇಪರ್ ಮಿಲ್ ಮತ್ತು ಸಮಸ್ಟಿಪುರದಲ್ಲಿ ರಾಮೇಶ್ವರ್ ಸೆಣಬಿನ ಕಾರ್ಖಾನೆ ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಭಾರತದಲ್ಲಿ ವಿಮಾನಯಾನ ಸೇವೆಗಳ ಆರಂಭಕ್ಕೂ ದರ್ಭಾಂಗ ಎಸ್ಟೇಟ್ ನಿಕಟ ಸಂಬಂಧ ಹೊಂದಿತ್ತು.

ತಮಿಳ್ನಾಡಿನ ಹೆಣ್ಮಕ್ಕಳು ಓದ್ತಾರೆ, ಉತ್ತರ ಭಾರತದ ಹೆಣ್ಮಕ್ಕಳು ಮಕ್ಕಳನ್ನು ಹೆರ್ತಾರೆ! ದಯಾನಿಧಿ‌ ಮಾರನ್ ಹೀಗೆ ಹೇಳಿದ್ದೇಕೆ?

ಕಾರಿನ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ವಿದ್ಯಾರ್ಥಿಗೆ 1.11ಲಕ್ಷ ದಂಡ! ಕಾರಿನ ಬೆಲೆ 70 ಸಾವಿರ ರೂ.!

ಗೆಳತಿ ಜತೆ ಲೈಂ*ಗಿಕ ಚಟುವಟಿಕೆಯಲ್ಲಿ ತೊಡಗಿದ್ದ ಯುವಕ ಸಾವು!

TAGGED:is no more.The Queenwho donated 600 kg of gold and 3 private planes during the India-China war
Share This Article
Facebook Twitter Copy Link Print
Previous Article ಕಾರಿನ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ವಿದ್ಯಾರ್ಥಿಗೆ 1.11ಲಕ್ಷ ದಂಡ! ಕಾರಿನ ಬೆಲೆ 70 ಸಾವಿರ ರೂ.!
Next Article ಟ್ರಂಪ್ ಆರ್ಭಟಕ್ಕೆ ನಲುಗಿದ ಇರಾನ್‌ನಲ್ಲಿ ಹೆಚ್ಚುತ್ತಲೇ ಇದೆ ಉದ್ವಿಗ್ನತೆ, ವಿಮಾನ ಹಾರಾಟ ಬಂದ್

Popular Posts

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

You Might Also Like

ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?