Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟ್ರಂಪ್ ಆರ್ಭಟಕ್ಕೆ ನಲುಗಿದ ಇರಾನ್‌ನಲ್ಲಿ ಹೆಚ್ಚುತ್ತಲೇ ಇದೆ ಉದ್ವಿಗ್ನತೆ, ವಿಮಾನ ಹಾರಾಟ ಬಂದ್
ದೇಶಪ್ರಮುಖವಿದೇಶ

ಟ್ರಂಪ್ ಆರ್ಭಟಕ್ಕೆ ನಲುಗಿದ ಇರಾನ್‌ನಲ್ಲಿ ಹೆಚ್ಚುತ್ತಲೇ ಇದೆ ಉದ್ವಿಗ್ನತೆ, ವಿಮಾನ ಹಾರಾಟ ಬಂದ್

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇರಾನ್‌ ಆಡಳಿತ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿರುವ ಜನ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ದಿನೇದಿನೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಸರ್ಕಾರದ ಕಠಿಣ ನಿರ್ಧಾರಗಳಿಂದ ನೂರಾರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

ಪ್ರತಿಭಟನಾಕಾರರಿಗೆ ಏನೂ ಮಾಡದಂತೆ ಅಮೆರಿಕ ಈಗಾಗಲೇ ಇರಾನ್‌ ಆಡಳಿತಕ್ಕೆ ಎಚ್ಚರಿಕೆ ನೀಡಿದೆ.

ಪ್ರತಿಭಟನಾಕಾರರನ್ನು ಕೊಂದರೆ ಯುಎಸ್‌ ಮಿಲಿಟರಿ ದಾಳಿ ಮಾಡಬಹುದು ಎಂದು ಡೊನಾಲ್ಡ್ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

ಈ ಎಚ್ಚರಿಕೆ ಬೆನ್ನಲ್ಲೇ ಇರಾನ್‌ ತನ್ನೆಲ್ಲಾ ಏರ್‌ಸ್ಪೇಸ್‌ ಮುಚ್ಚುವಂತೆ ಆದೇಶ ಹೊರಡಿಸಿದೆ. ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳನ್ನು ಬದಲಾಯಿಸಿವೆ.

ಲುಫ್ಥಾನ್ಸ ಮತ್ತು ಇಂಡಿಗೋ ವಿಮಾನಗಳು ಮಾರ್ಗ ಬದಲಾಯಿಸಿದ್ದರೆ, ಏರ್ ಇಂಡಿಯಾ ಕೆಲವು ವಿಮಾನಗಳನ್ನು ರದ್ದುಗೊಳಿಸಿದೆ.

ಆರಂಭದಲ್ಲಿ ಪ್ರತಿಭಟನೆ ನೆಪದಲ್ಲಿ ಇರಾನ್‌ನಲ್ಲಿ ಶುರುವಾದ ಗದ್ದಲ, ಇದೀಗ ಯುದ್ಧದ ಭೀತಿ ಸೃಷ್ಟಿಸಿದೆ. ಹೀಗಾಗಿ ನಾಗರಿಕ ವಿಮಾನಗಳಿಗೆ ಸಂಭವನೀಯ ಅಪಾಯಗಳನ್ನು ತಗ್ಗಿಸಲು ವಿಮಾನಯಾನ ಸಂಸ್ಥೆಗಳು ಸುರಕ್ಷತೆಗೆ ಆದ್ಯತೆ ನೀಡುತ್ತಿವೆ.

ರಾಯಿಟರ್ಸ್ ವರದಿಯಂತೆ, ಇರಾನ್ ತನ್ನ ವಾಯುಪ್ರದೇಶವನ್ನು ಭಾರತೀಯ ಕಾಲಮಾನ ಗುರುವಾರ ಮುಂಜಾನೆ 3:45ಕ್ಕೆ (ಇಟಿ ಸಂಜೆ 5:15, ಜಿಎಂಟಿ 2215) ಎಲ್ಲಾ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಸೂಚನೆಯ ಪ್ರಕಾರ, ಅಧಿಕೃತ ಅನುಮತಿ ಪಡೆದ ಅಂತರರಾಷ್ಟ್ರೀಯ ವಿಮಾನಗಳಿಗೆ ಮಾತ್ರ ದೇಶದಲ್ಲಿ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ, ಇರಾನ್‌ನ ವಾಯುಪ್ರದೇಶ ದಿಢೀರ್ ಬಂದ್‌ನಿಂದ ತನ್ನ ಕೆಲವು ಅಂತರರಾಷ್ಟ್ರೀಯ ವಿಮಾನಗಳಿಗೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.

‘ಎಕ್ಸ್’ (X) ಪೋಸ್ಟ್‌ವೊಂದರಲ್ಲಿ, ಇರಾನ್‌ನ ವಾಯುಪ್ರದೇಶ ಬಂದ್‌ನಿಂದಾಗಿ, ನಮ್ಮ ಕೆಲವು ಅಂತರರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ನಿಮ್ಮ ವಿಮಾನಕ್ಕೆ ತೊಂದರೆಯಾಗಿದ್ದಲ್ಲಿ, ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ರೀಬುಕಿಂಗ್ ಆಯ್ಕೆಗಳನ್ನು ಸರ್ಚ್‌ ಮಾಡಿ ಅಥವಾ ರಿಫಂಡ್‌ ಪಡೆಯಿರಿ ಎಂದು ಇಂಡಿಗೋ ಹೇಳಿದೆ.

ಏರ್ ಇಂಡಿಯಾ ಕೂಡ ಮಾರ್ಗ ಬದಲಾವಣೆ ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ ಕೆಲವು ವಿಮಾನಗಳನ್ನು ರದ್ದುಗೊಳಿಸಿದೆ. ಇರಾನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ, ಆ ಪ್ರದೇಶಗಳಲ್ಲಿ ಹಾರಾಟ ಮಾಡಬೇಕಿದ್ದ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಆದ್ದರಿಂದ ಪ್ರಯಾಣದಲ್ಲಿ ವಿಳಂಬವಾಗಬಹುದು ಎಂದು ಸಂಸ್ಥೆ ತಿಳಿಸಿದೆ.

ವಾಯುಪ್ರದೇಶ ಮುಚ್ಚಿದ ನಂತರ, ಟೆಹ್ರಾನ್‌ಗೆ ತೆರಳಬೇಕಿದ್ದ ಏರೋಫ್ಲಾಟ್ ವಿಮಾನವು Flightradar24 ದತ್ತಾಂಶದ ಪ್ರಕಾರ ಮಾಸ್ಕೋಗೆ ಮರಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಈ ಮೊದಲು, ಪ್ರಾದೇಶಿಕ ಉದ್ವಿಗ್ನತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜರ್ಮನಿ ತನ್ನ ವಿಮಾನಯಾನ ಸಂಸ್ಥೆಗಳಿಗೆ ಇರಾನ್ ವಾಯುಪ್ರದೇಶವನ್ನು ತಪ್ಪಿಸಲು ಎಚ್ಚರಿಕೆ ನೀಡಿತ್ತು.

ಅಮೆರಿಕ ವಿಮಾನಗಳಿಗೆ ನಿಷೇಧ

ಅಮೆರಿಕ ಈಗಾಗಲೇ ತನ್ನ ವಾಣಿಜ್ಯ ವಿಮಾನಗಳಿಗೆ ಇರಾನ್ ಮೇಲೆ ಹಾರಾಟ ನಿಷೇಧಿಸಿದೆ. ಅಲ್ಲದೆ, ಉಭಯ ದೇಶಗಳ ನಡುವೆ ಯಾವುದೇ ನೇರ ವಿಮಾನ ಮಾರ್ಗಗಳಿಲ್ಲ.

ಕಳೆದ ವಾರ ಫ್ಲೈದುಬೈ ಮತ್ತು ಟರ್ಕಿಶ್ ಏರ್‌ಲೈನ್ಸ್‌ನಂತಹ ಸಂಸ್ಥೆಗಳು ಕೂಡ ಇರಾನ್‌ಗೆ ತೆರಳಬೇಕಿದ್ದ ಹಲವು ವಿಮಾನಗಳನ್ನು ರದ್ದುಗೊಳಿಸಿವೆ.

OPSGROUP ನಡೆಸುವ ವಿಮಾನ-ಅಪಾಯದ ಮಾಹಿತಿ ತಾಣ ಸೇಫ್ ಏರ್‌ಸ್ಪೇಸ್ ಪ್ರಕಾರ, ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ಕಡಿಮೆ ಮಾಡಿವೆ ಅಥವಾ ನಿಲ್ಲಿಸಿವೆ. ಬಹುತೇಕ ವಿಮಾನಗಳು ಇರಾನ್ ವಾಯುಪ್ರದೇಶದಿಂದ ದೂರವಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮುಂದಿನ ಸೂಚನೆ ಬರುವವರೆಗೆ ಇರಾನ್ ಮತ್ತು ಇರಾಕ್‌ನ ವಾಯುಪ್ರದೇಶದಲ್ಲಿ ವಿಮಾನಯಾನ ನಿಲ್ಲಿಸಲಾಗಿದೆ ಎಂದು ಲುಫ್ಥಾನ್ಸ ಬುಧವಾರ ತಿಳಿಸಿದೆ.

ಇದೇ ವೇಳೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ಅಧಿಸೂಚನೆ ಹೊರಡಿಸಿ, ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಪ್ರತಿಭಟನೆಗಳ ದೃಷ್ಟಿಯಿಂದ ಮುಂದಿನ ಸೂಚನೆ ಬರುವವರೆಗೆ ಭಾರತೀಯ ನಾಗರಿಕರು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಗಂಭೀರ ಸೂಚನೆ ನೀಡಿದೆ.

ಫೆಬ್ರವರಿ 13 ರಿಂದ  ಹಂಪಿ ಉತ್ಸವ-2026

ಪತ್ನಿಯ ಕೊಂದು ರುಂಡ ಕತ್ತರಿಸಿ ಡ್ರಮ್ನಲ್ಲಿಟ್ಟ ಪತಿ

17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ

ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್

TAGGED:flights suspendedIran shaken by Trump's outburst: Tensions continue to rise
Share This Article
Facebook Twitter Copy Link Print
Previous Article ಭಾರತ ಚೀನಾ ಯುದ್ಧದ ವೇಳೆ 600 ಕೆಜಿ ಚಿನ್ನ,‌ 3 ಖಾಸಗಿ‌ ವಿಮಾನ ದಾನ ಮಾಡಿದ್ದ ಮಹಾರಾಣಿ ಇನ್ನಿಲ್ಲ
Next Article GOOD MORNING | Today’s Horoscope ಶುಭೋದಯ, ಇಂದಿನ ರಾಶಿ ಭವಿಷ್ಯ, 16-01-2026, ಶುಕ್ರವಾರ

Popular Posts

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

You Might Also Like

ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?