Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > China app ಭಾರೀ ಸಂಚಲನ ಸೃಷ್ಟಿಸಿದ ‘ಆರ್ ಯು ಡೆಡ್’ ಆ್ಯಪ್, ಜಾಗತಿಕ ಮಟ್ಟದಲ್ಲೂ ಸದ್ದು
ಅನಾವರಣದೇಶಪ್ರಮುಖಲೈಫ್‌ಸ್ಟೈಲ್ವಿದೇಶವೈರಲ್

China app ಭಾರೀ ಸಂಚಲನ ಸೃಷ್ಟಿಸಿದ ‘ಆರ್ ಯು ಡೆಡ್’ ಆ್ಯಪ್, ಜಾಗತಿಕ ಮಟ್ಟದಲ್ಲೂ ಸದ್ದು

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/you

newsics.com
ಆರ್‌ ಯು ಡೆಡ್‌ ಎಂಬ ಸುರಕ್ಷತಾ ಆ್ಯಪ್‌ವೊಂದು ಚೀನಾದಲ್ಲಿ ಭಾರೀ ಸಂಚಲನ ಸೃಷ್ಟಿಸುತ್ತಿದ್ದು, ಜಾಗತಿಕ ಮಟ್ಟದಲ್ಲೂ ಸಖತ್ ಸದ್ದು ಮಾಡುತ್ತಿದೆ.
ಚೀನಿ ಭಾಷೆಯಲ್ಲಿ ಸಿಲೆ ಮೆ (ಆರ್ ಯು ಡೆಡ್) ಹೆಸರಿನ ಸುರಕ್ಷತಾ ಅಪ್ಲಿಕೇಶನ್ ಚೀನಾದಲ್ಲಿ ವೈರಲ್ ಆಗುತ್ತಿದೆ. ಈ ಆ್ಯಪ್‌ ಈಗ ಆ್ಯಪಲ್ ಆ್ಯಪ್ ಸ್ಟೋರ್‌ನ ಪಾವತಿಸಿದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಮೂವರು Gen Z ಉದ್ಯಮಿಗಳ ತಂಡ ಅಭಿವೃದ್ಧಿಪಡಿಸಿದ ಈ ಅಪ್ಲಿಕೇಶನ್, ಚೀನಾದ ಅಂದಾಜು 125 ಮಿಲಿಯನ್ ಏಕಾಂಗಿ ನಿವಾಸಿಗಳಲ್ಲಿ ಬೆಳೆಯುತ್ತಿರುವ “ಸುರಕ್ಷತಾ ಆತಂಕ”ವನ್ನು ಪರಿಹರಿಸುತ್ತದೆ ಎಂದು ಹೇಳಲಾಗುತ್ತಿದೆ.
ಈ ಅಪ್ಲಿಕೇಶನ್‌ನ ಸೃಷ್ಟಿಕರ್ತರು ನಗರ ಪ್ರದೇಶಗಳಲ್ಲಿ ಏಕಾಂಗಿಯಾಗಿ ವಾಸಿಸುವ ಕೆಲಸಗಾರರು, ಮನೆಯಿಂದ ದೂರವಿರುವ ವಿದ್ಯಾರ್ಥಿಗಳು, ಹಿರಿಯ ಒಂಟಿ ಜೀವಗಳು ಮತ್ತು ಏಕಾಂತ ಜೀವನಶೈಲಿಯನ್ನು ಆಯ್ಕೆ ಮಾಡುವ ಯಾರಿಗಾದರೂ ಭಾರೀ ಪ್ರಯೋಜನಕಾರಿ ಎಂದು ಹೇಳಿದ್ದಾರೆ.

ಚೀನಾದಲ್ಲಿ ಈ ವರ್ಗದ ಜನರೇ ಭಾರೀ ಸಂಖ್ಯೆಯಲ್ಲಿ ಆರ್‌ ಯು ಡೆಡ್‌ ಆ್ಯಪ್‌ ಡೌನ್‌ಲೋಡ್‌
ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್‌ ಯು ಡೆಡ್‌ ಅಪ್ಲಿಕೇಶನ್‌ನ ಪರಿಕಲ್ಪನೆ ಸರಳವಾಗಿದೆ. ನೀವು ಜೀವಂತವಾಗಿದ್ದೀರಿ ಎಂದು ಖಚಿತಪಡಿಸಲು ನೀವು ಪ್ರತಿ ಎರಡು ದಿನಗಳಿಗೊಮ್ಮೆ ಈ ಆ್ಯಪ್‌ ಪರಿಶೀಲಿಸಬೇಕಾಗುತ್ತದೆ. ಬಳಕೆದಾರರು ಸತತ ಎರಡು ದಿನಗಳವರೆಗೆ ಪರಿಶೀಲಿಸಲು ವಿಫಲವಾದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ಪೂರ್ವ ನಿಯೋಜಿತ ತುರ್ತು ಸಂಪರ್ಕಕ್ಕೆ ಇಮೇಲ್ ಅಥವಾ ಅಧಿಸೂಚನೆಯನ್ನು ಕಳುಹಿಸುತ್ತದೆ. ಅಪ್ಲಿಕೇಶನ್‌ಗೆ ಯಾವುದೇ ಲಾಗಿನ್ ಅಥವಾ ವೈಯಕ್ತಿಕ ಡೇಟಾ ಅಗತ್ಯವಿಲ್ಲ ಮತ್ತು ಅತ್ಯಂತ ಸರಳ ಇಂಟರ್ಫೇಸ್ ಹೊಂದಿದೆ. ಈ ಆ್ಯಪ್ ವಯಸ್ಸಾದ ಒಂಟಿ ಜನರಿಗೆ ಬಹಳ ಉಪಯುಕ್ತವಾಗಿದ್ದರೂ, ಈ ಅಪ್ಲಿಕೇಶನ್‌ನ ವೈರಲ್ ಬೆಳವಣಿಗೆಗೆ ಯುವ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ನಗರ ಕೇಂದ್ರಗಳಲ್ಲಿ ಸಾಯುವ ಭಯದಲ್ಲಿರುವ ಏಕಾಂಗಿ ಕಚೇರಿ ಕೆಲಸಗಾರರು ಕಾರಣರಾಗಿದ್ದಾರೆ ಎಂದು ಆರಂಭಿಕ ಡೇಟಾಗಳು ಸೂಚಿಸುತ್ತಿವೆ. ಮೂನ್‌ಸ್ಕೇಪ್ ಟೆಕ್ನಾಲಜೀಸ್ ಎಂಬ ಕಂಪನಿಯು ಕೇವಲ 1,000 ಯುವಾನ್ (ಸುಮಾರು 13,000 ರೂ.) ಗೆ ಈ ಅಪ್ಲಿಕೇಶನ್ ನಿರ್ಮಿಸಿದೆ ಎಂದು ವರದಿಯಾಗಿದೆ. ಆದರೆ ಈಗ ಸಂಸ್ಥೆಯು ಸರಿಸುಮಾರು 10 ಮಿಲಿಯನ್ ಯುವಾನ್ ಮೌಲ್ಯ ನೀಡುವ ಹೂಡಿಕೆಗಾಗಿ ಶೋಧಕಾರ್ಯ ನಡೆಸಿದೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಆರ್‌ ಯು ಡೆಡ್‌ ಆ್ಯಪ್‌ ಉಚಿತವಾಗಿ ನೀಡಲಾಯಿತಾದರೂ, ಈಗ ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಲು 8 ಯುವಾನ್‌ (ಸುಮಾರು 103 ರೂ.) ದರ ನಿಗದಿಪಡಿಸಲಾಗಿದೆ. ಇದು ತ್ವರಿತ, ಸಾಂದರ್ಭಿಕ ಡೌನ್‌ಲೋಡ್‌ಗಳನ್ನು ಪ್ರೋತ್ಸಾಹಿಸುವ ಬೆಲೆಯಾಗಿದೆ. ಆದರೂ ಚೀನಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ.
ಚೀನಾದಲ್ಲಿ ಆರ್‌ ಯು ಡೆಡ್‌ ಅಪ್ಲಿಕೇಶನ್‌ ಜನಪ್ರಿಯತೆ ಪಡೆದುಕೊಂಡಿರುವುದಕ್ಕೆ, ಅಲ್ಲಿ ಒಂಟಿ ಜೀವನ ನಡೆಸುವವರ ಸಂಖ್ಯೆಯಲ್ಲಿ ವೃದ್ಧಿಯಾಗಿರುವುದೇ ಕಾರಣ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2030ರ ವೇಳೆಗೆ ಚೀನಾದಲ್ಲಿ ಸುಮಾರು 200 ಮಿಲಿಯನ್ ಜನರು ಏಕಾಂಗಿ ಜೀವನವನ್ನು ನಡೆಸುತ್ತಿರುತ್ತಾರೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತಿವೆ. ಚೀನಾದ ಯುವ ವೃತ್ತಿಪರರಲ್ಲಿ ಒಂಟಿ ಜೀವನ ಮನಸ್ಥಿತಿ ಹೆಚ್ಚಿದೆ. 20- 30 ವಯಸ್ಸಿನ ಯುವಕರು ಕೆಲಸಕ್ಕಾಗಿ ಬೀಜಿಂಗ್, ಶಾಂಘೈ ಮತ್ತು ಶೆನ್ಜೆನ್‌ನಂತಹ ಪ್ರಮುಖ ನಗರಗಳಿಈಗೆ ವಲಸೆ ಹೋಗುತ್ತಿದ್ದಾರೆ. ಇವರು ಖಾಸಗಿತನದ ಹೆಸರಿನಲ್ಲಿ ಏಕಾಂಗಿ ಜೀವನಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಅಧ್ಯಯನ ವರದಿಗಳು ಹೇಳಿವೆ. ಅಪ್ಲಿಕೇಶನ್ ವ್ಯಾಪಕವಾಗಿ ಯಶಸ್ವಿಯಾಬಬಭಗಿದ್ದರೂ, ಅದರ ವಿಚಿತ್ರ ಹೆಸರಿನ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಕೆಲವರು ಈ ಹೆಸರನ್ನು “ಅಶುಭ” ಅಥವಾ “ದುರದೃಷ್ಟಕರ” ಎಂದು ಕರೆದಿದ್ದಾರೆ. ಹೀಗಾಗಿ ಈ ಆ್ಯಪ್‌ನ ಡೆವಲಪರ್‌ಗಳು “ಆರ್‌ ಯು ಡೆಡ್‌” ಬದಲಾಗಿ “ನೀವು ಚೆನ್ನಾಗಿದ್ದೀರಾ?” ಅಥವಾ “ನೀವು ಜೀವಂತವಾಗಿದ್ದೀರಾ?” ನಂತಹ ಮೃದುವಾದ ಪರ್ಯಾಯ ಹೆಸರುಗಳನ್ನು
ಪರಿಗಣಿಸುತ್ತಿದ್ದಾರೆ. ಕಂಪನಿಯು ಜನರ ಪ್ರತಿಕ್ರಿಯೆಯನ್ನು ಒಪ್ಪಿಕೊಂಡಿದ್ದು, ಅಪ್ಲಿಕೇಶನ್ ಮರುನಾಮಕರಣಕ್ಕೆ ಮುಂದಾಗಿದೆ.

https://twitter.com/i/status/2011382666709598428ಹ

ಬಾಲಕಿಯನ್ನ ಕಿಡ್ನಾಪ್ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿದ ಪಾಕಿಸ್ತಾನಿ ಗ್ರೂಮಿಂಗ್ ಗ್ಯಾಂಗ್

ಸೌಂದರ್ಯ ಅಡಗಿರುವುದು ರೂಪದಲ್ಲಲ್ಲ: 26 ಶಸ್ತ್ರಚಿಕಿತ್ಸೆ ಕಂಡ ಯುವಕ ಹೇಳಿದ್ದೇನು?

ವೈದ್ಯೆಯಾಗುವ ಕನಸು ಕಂಡಿದ್ದ ವಿದ್ಯಾರ್ಥಿನಿ ಎಲೆಕೋಸಿನ ಹುಳುವಿಗೆ ಬಲಿ!

TAGGED:making waves globallyThe 'Are You Dead' app created a huge stir
Share This Article
Facebook Twitter Copy Link Print
Previous Article ಬಿಗ್‌ಬಾಸ್‌ ಫಿನಾಲೆ ಹೊತ್ತಲ್ಲೇ ಸುದೀಪ್‌ ಭೇಟಿಯಾದ ಕರವೇ ನಾರಾಯಣಗೌಡ!
Next Article BBK 12 ಮಿಡ್‌ ವೀಕ್‌ ಎಲಿಮಿನೇಶನ್‌: ಬಿಗ್ ಬಾಸ್ ಮನೆಯಿಂದ ಹೊರಬಂದ ಧ್ರುವಂತ್‌

Popular Posts

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

You Might Also Like

ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?