Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪಾಕಿಸ್ತಾನಿ ಗ್ರೂಮಿಂಗ್ ಗ್ಯಾಂಗ್ ಒಂದು ಅಪ್ರಾಪ್ತ ಸಿಖ್ ಹುಡುಗಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಅಪಹರಿಸಿದ್ದಲ್ಲದೆ, ನಂತರ ಸಾಮೂಹಿಕ ಅತ್ಯಾಚಾರ ನಡೆಸಿದೆ.
14 ವರ್ಷದ ಈ ಹುಡುಗಿಯನ್ನು ಒಂದು ಫ್ಲ್ಯಾಟ್ ನಲ್ಲಿ ಬಂಧಿಸಿ 5-6 ಮುಸಲ್ಮಾನರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಹುಡುಗಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ, ಅವಳನ್ನು ಬೆದರಿಸಿ ಸುಮ್ಮನಿರಿಸಲಾಗಿತ್ತು. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪಶ್ಚಿಮ ಲಂಡನ್ ನಲ್ಲಿ ವಾಸಿಸುವ 200 ಕ್ಕೂ ಹೆಚ್ಚು ಸಿಖ್ಖರು ಆ ಕಟ್ಟಡದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು ಮತ್ತು ಹುಡುಗಿಯನ್ನು ಅಲ್ಲಿಂದ ಬಿಡಿಸಿದರು.
ಪಶ್ಚಿಮ ಲಂಡನ್ ನಲ್ಲಿ ಇಂತಹ ಸಣ್ಣ ಹುಡುಗಿಯರ ಅಪಹರಣ ಮತ್ತು ಲೈಂಗಿಕ ಶೋಷಣೆಯ ಘಟನೆಗಳು ಸಾಮಾನ್ಯವಾಗುತ್ತಿವೆ ಎಂದು ಸಿಖ್ಖರು ಆರೋಪಿಸಿದ್ದಾರೆ. ಲಂಡನ್ ಪೊಲೀಸರು ಇಂತಹ ಅಪರಾಧಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.