Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಸೀಸನ್ 12 ಈಗಾಗಲೇ 15 ವಾರಗಳನ್ನು ಸಂಪೂರ್ಣವಾಗಿ ಪೂರೈಸಿದ್ದು, ಇದೀಗ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಒಟ್ಟ 7 ಸ್ಪರ್ಧಗಳಿದ್ದಾರೆ.
ಆದರೆ, ಇದರಲ್ಲಿ 6 ಸ್ಪರ್ಧಗಳ ಮಾತ್ರ ಬಿಗ್ ಬಾಸ್ ಫಿನಾಲೆಗೆ ತಲುಪುತ್ತಾರೆ. ಹೀಗಾಗಿ, ಒಬ್ಬ ಸ್ಪರ್ಧಿ ಇದೀಗ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯ ಮೂಲಕ ಮನೆಯನ್ನು ಬಿಟ್ಟು ಹೊರಹೋಗಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಒಬ್ಬ ಸ್ಪರ್ಧಿ ನಾನು ಮಿಡ್ ವೀಕ್ ಎಲಿಮಿನೇಷನ್‌ಗೆ ಈಗಲೇ ಸಿದ್ಧವಾಗಿದ್ದೇನೆ. ಯಾವಾಗ ಬೇಕಾದರೂ ಮನೆಯಿದ ಹೊರಗೆ ಹೋಗುವ ಸಂದರ್ಭ ಬರಬಹುದು.
ಈ ಬಾರಿ ಕಾವ್ಯಾ ಅಥವಾ ಧ್ರುವಂತ್ ಮನೆಯಿಂದ ಹೊರಬರಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.ಕಾವ್ಯಾ ಈ ಸೀಸನ್ ತುಂಬಾ ಸ್ಟ್ರಾಂಗ್ ಆಗಿ ಆಡಿದ ಸ್ಪರ್ಧಿ ಎನ್ನಬಹುದು . ಮನೆಯ ಪ್ರತೀ ಟಾಸ್ಕ್ ನಲ್ಲಿ ಕೂಡ ಚುರುಕುತನ ಮತ್ತು ಸ್ಪಷ್ಟ ಮಾತಿನ ಶೈಲಿ ಯಿಂದ ಎಲ್ಲರ ಗಮನ ಸೆಳೆದಿದ್ದಾರೆ . ಆದರೆ ಕಳೆದ ಕೆಲವು ವಾರಗಳಿಂದ ವೀಕ್ಷಕರ ವೋಟಿಂಗ್ ಟ್ರೆಂಡ್‌ನಲ್ಲಿ ಕಾವ್ಯಾ ಸ್ವಲ್ಪ ಹಿಂದಕ್ಕೆ ಸರಿದಿರುವ ಮಾತುಗಳು ಕೇಳಿಬರುತ್ತಿವೆ. ಈ ಕಾರಣದಿಂದ ಈ ವಾರ ಅವರ ಹೆಸರು ಎಲಿಮಿನೇಷನ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಧ್ರುವಂತ್ ಈ ಸೀಸನ್‌ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಸ್ಪರ್ಧಿಗಳಲ್ಲಿ ಒಬ್ಬರು. ತಮ್ಮ ನೇರ ನಡವಳಿಕೆ, ಮತ್ತು ಟಾಸ್ಕ್‌ಗಳಲ್ಲಿ ಇವರು ಆಡಿದ ರೀತಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಕಳೆದ ವಾರದಿಂದ ವೀಕ್ಷಕರ ವೋಟಿಂಗ್ ಕಡಿಮೆಯಾದಿರಬಹುದು ಎನ್ನುವ ಊಹೆಗಳು ಕೇಳಿಬರುತ್ತಿವೆ. ಇದರಿಂದ ಅವರು ಡೇಂಜರ್ ಝೋನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವದಂತಿ ಹರಿದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಾರ ಕಾವ್ಯ ಅಥವಾ ಧ್ರುವಂತ್ ಮನೆಯಿಂದ ಹೊರಗೆ ಬರಲಿದ್ದಾರೆ ಎನ್ನಲಾಗ್ತಿದೆ.