Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನೆಮ್ಮದಿಗಾಗಿ 2.7 ಕೋಟಿ ಸಂಬಳ ಇರುವ ಉದ್ಯೋಗವನ್ನು 22 ವರ್ಷದ ಯುವಕನೊಬ್ಬ ತಿರಸ್ಕರಿಸಿದ್ದಾನೆ.ಅಮೆರಿಕದ ಎಐ ಸ್ಟಾರ್ಟ್‌ಅಪ್ ‘ಕ್ಲೂಲಿ’ಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿದ್ದ ಡೇನಿಯಲ್ ಮಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ.
ಸ್ಕೂಲ್‌ನಿಂದ ಪದವಿ ಮುಗಿಸಿ, ವಾರ್ಷಿಕ 3 ಲಕ್ಷ ಡಾಲರ್ ಅಂದರೆ ಅಂದಾಜು 2.7 ಕೋಟಿ ರೂಪಾಯಿ ಸಂಬಳದ ಕೆಲಸಕ್ಕೆ ಸೇರಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿಎಂಒ ಆಗಿ ನೇಮಕಗೊಂಡಿದ್ದ ಮಿನ್ ಅವರ ಸಾಧನೆ ಅದ್ಭುತವಾಗಿತ್ತು. ಆದರೆ, ಕಳೆದ ಮೇ ತಿಂಗಳಲ್ಲಿ ಈ ಕೆಲಸಕ್ಕೆ ಸೇರಿದ್ದ ಅವರು ಕೇವಲ ಎಂಟು ತಿಂಗಳಲ್ಲೇ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಸಂಬಳ ದೊಡ್ಡದಿದ್ದರೂ ಆ ಕೆಲಸ ನೀಡುತ್ತಿದ್ದ ಒತ್ತಡ ಅಷ್ಟೇ ಇದೆ. ಡೇನಿಯಲ್ ದಿನಕ್ಕೆ ಸತತ 12 ಗಂಟೆಗಳ ಕಾಲ ಕಠಿಣ ಕೆಲಸ ಮಾಡಬೇಕಿತ್ತು. ಈ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರಿಗೆ ತಮ್ಮ ವೈಯಕ್ತಿಕ ಜೀವನಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಸ್ನೇಹಿತರೊಂದಿಗೆ ಊಟ ಮಾಡಲು ಅಥವಾ ಸ್ವಂತ ಸಹೋದರನ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡುವಂತಹ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಮಿನ್ ಬೇಸರದಿಂದ ಹೇಳಿಕೊಂಡಿದ್ದಾರೆ.
ಡೇನಿಯಲ್ ಅವರ ಕೆಲಸದ ಮೇಲಿನ ಅಸಮಾಧಾನವನ್ನು ಕಂಪನಿಯ ಸಿಇಒ ರಾಯ್ ಲೀ ಗಮನಿಸಿದ್ದರು. ಮಿನ್ ಅವರ ಜೊತೆ ಮಾತನಾಡಿದ ಸಿಇಒ, ಅವರ ಅಳಲನ್ನು ಕೇಳಿ ಆಶ್ಚರ್ಯಕರವಾಗಿ ಸ್ಪಂದಿಸಿದರು. ಕೆಲಸ ಬಿಡುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ ಸಿಇಒ, ‘ನಿಮಗೆ ಯಾವ ವಿಷಯ ಸಂತೋಷ ನೀಡುತ್ತದೆಯೋ ಅದನ್ನೇ ಆಯ್ಕೆ ಮಾಡಿ’ ಎಂದು ಪ್ರೋತ್ಸಾಹಿಸಿದರು. ಮೇಲಧಿಕಾರಿಯ ಈ ಬೆಂಬಲದಿಂದ ಡೇನಿಯಲ್ ನಿರಾಳವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದರು.
https://www.instagram.com/reel/DTTrWoLDQty/?igsh=eXh4amw2dXVodXdm
https://www.newsics.com/2026/01/12/mallammas-entry-back-into-the-bigg-boss-house/