Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ನಟ ಪ್ರತಿ ಎಪಿಸೋಡ್ನಲ್ಲೂ ಕಾಮಿಡಿ, ಎಂಟರ್ಟೈನ್ಮೆಂಟ್ ಮೂಲಕ ವೀಕ್ಷಕರನ್ನ ಕಟ್ಟಿಹಾಕಿದ್ದರು. ಈ ಸೀಸನ್ನ ʻಒನ್ ಮ್ಯಾನ್ ಶೋ, ಮಾಸ್ಟರ್ಮೈಂಡ್, ಬರೆದಿಟ್ಟುಕೊಳ್ಳಿ ಕನ್ನಡಿಗರ ಮನಗೆದ್ದಿರುವ ಗಿಲ್ಲಿ ಟ್ರೋಫಿ ಗೆಲ್ಲೋದೊಂದೇ ಬಾಕಿ ಇದೆʼ ಎಂದೆಲ್ಲಾ ವೀಕ್ಷಕರು ಖುಷಿಯನ್ನ ವ್ಯಕ್ತಪಡಿಸುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲಿ ಇರುವ ಗಿಲ್ಲಿ ನಟ ಅವರಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಈಗಾಗಲೇ ರಾಜ್ಯಾದ್ಯಂತ ಗಿಲ್ಲಿ ಪರವಾಗಿ ಅಲೆ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅವರೇ ಅಂತ ಜನರು ಫಿಕ್ಸ್ ಆಗಿಬಿಟ್ಟಿದ್ದಾರೆ. ಇದೀಗ ಗಿಲ್ಲಿ ನಟ ಪರವಾಗಿಯೇ ಯೋಧರೂ ಮಾತನಾಡಿದ್ದಾರೆ. ಆ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ಗಿಲ್ಲಿ ನಟನನ್ನ ಎಲ್ಲರೂ ಇಷ್ಟ ಪಡ್ತಾರೆ. ದೂರದ ಗಡಿಯಲ್ಲಿರೋ ಯೋಧರೂ ಗಿಲ್ಲಿಯನ್ನ ಇಷ್ಟ ಪಡ್ತಾರೆ. ಅಷ್ಟೆ ಯಾಕೆ ಒಂದು ವಿಡಿಯೋ ಕೂಡ ಮಾಡಿದ್ದಾರೆ. ಗಿಲ್ಲಿ ಗೆಲ್ಲ ಬೇಕು. ಗಿಲ್ಲಿಗೆ ನಾವು ವೋಟ್ ಹಾಕಿದ್ದೇವೆ. ನೀವೂ ಹಾಕಿ ಅಂತಲೇ ಕೇಳಿಕೊಂಡಿದ್ದಾರೆ.
ಈ ಮೂಲಕ ಗಿಲ್ಲಿ ಗೆಲ್ಲಬೇಕು ಅಂತಲೂ ಹೇಳಿಕೊಂಡಿದ್ದಾರೆ. ಹಾಗೆ ಗಿಲ್ಲಿ ನಟನ ಬಗ್ಗೆ ಮಾತನಾಡಿರೋ ಯೋಧರು ಕಾಶ್ಮೀರದಿಂದಲೇ ಮಾತನಾಡಿದ್ದಾರೆ. ಹಾಗಾಗಿಯೇ ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಈ ಒಂದು ವಿಷಯ ಮೆನ್ಷನ್ ಮಾಡಿದ್ದಾರೆ. ಕಾಶ್ಮೀರದ ಗಡಿಯಲ್ಲೂ ಗಿಲ್ಲಿ ಹವಾ ಅನ್ನೋದು ಈ ವಿಡಿಯೋದಲ್ಲಿ ಹೈಲೈಟ್ ಆಗಿದೆ.
https://www.instagram.com/reel/DTVS67iioeV/?igsh=d3dlc2lxY3V1azJr