Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿನ ಬಂಧಿಸಲಾಗಿತ್ತು. ಆದರೆ ಈ ಪ್ರಕರಣ ಮತ್ತೊಮ್ಮೆ ಸುದ್ದಿಯಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ನಟಿ ಮತ್ತು ಎವಿಆರ್ ರೆಡ್ಡಿ ಜೊತೆಗಿದ್ದ ಫೋಟೋಗಳು ಈಗ ಮತ್ತಷ್ಟು ಸುದ್ದಿಯಾಗಿದೆ. ಈಗ ಅವರಿಬ್ಬರೂ ತುಂಬಾ ಆತ್ಮೀಯವಾಗಿರುವ ಫೋಟೋಗಳು ಪತ್ತೆಯಾಗಿದೆ.
ನಟಿಗೆ ಎವಿಆರ್ ರೆಡ್ಡಿಯಿಂದ ಲಕ್ಷಾಂತರ ಹಣ ಮತ್ತು ಲಕ್ಷಾಂತರ ಮೌಲ್ಯದ ವಸ್ತುಗಳು ಕೊಟ್ಟಿರೋ ಬಗ್ಗೆಯೂ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ. ಲಕ್ಷಾಂತರ ಬೆಲೆಬಾಳುವ ಜ್ಯುವೆಲರಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಫರ್ನೀಜರ್ಸ್, ಫ್ಲೈಟ್ ಟಿಕೆಟ್ಸ್, ಅಕೌಂಟ್ ಸ್ಟೇಟ್ಮೆಂಟ್ಸ್ ಕೂಡ ವೈರಲ್ ಆಗಿದೆ.
ಹೀಗೆ ಅನೇಕ ವಿಚಾರಗಳು ವೈರಲ್ ಆಗಿದ್ದು, ಸರಿಸುಮಾರು ಒಂದು ಕೋಟಿ ಹಣ ಕೊಟ್ಟಿದ್ದೆ ಎಂದು ಎವಿಆರ್ ರೆಡ್ಡಿ ಹೇಳಿಕೊಂಡಿದ್ದಾರೆ. ಸುದ್ಧಿಗೋಷ್ಠಿ ನಡೆಸಿ ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದ ಎವಿಆರ್ ರೆಡ್ಡಿ ಹಾಗೂ ನಟಿಯ ಸಂಬಂಧ ಈಗ ಮತ್ತಷ್ಟುವ ಸುದ್ದಿಗಳು ರಿವೀಲ್ ಆಗಿವೆ.
ನಟಿ ಮಾಡಿದ್ದ ಕೆಲವೊಂದು ಆರೋಪ ಗಳನ್ನು ತಳ್ಳಿ ಹಾಕಿದ್ದ ರೆಡ್ಡಿ ತಮ್ಮ ಸೈಡ್ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಸೆಲೆಬ್ರೇಷನ್ಸ್ ಫೋಟೋಸ್, ಇಬ್ಬರು ಜೊತೆಗಿರುವ ಫೋಟೋಸ್ ವೈರಲ್ ಆಗಿವೆ. 7 ಲಕ್ಷ ಬೆಲೆಬಾಳುವ ಲೈಟ್ಸ್, ಟಿವಿ, 33 ಸಾವಿರ ಬೆಲೆ ಬಾಳುವ ಡೈನಿಂಗ್ ಸೆಟ್, 1.30 ಲಕ್ಷ ಬೆಲೆ ಬಾಳುವ ಹಾಸಿಗೆ, 10 ಲಕ್ಷ ಬೆಲೆ ಬಾಳುವ ಫರ್ನಿಚರ್ಸ್, 15 ಲಕ್ಷಕ್ಕು ಹೆಚ್ಚು ಬೆಲೆಬಾಳುವ ಚಿನ್ನಾಭರಣ, 1 ಲಕ್ಷದ ವರೆಗು ಓಡಾಡಿರುವ ಫ್ಲೈಟ್ ಟಿಕೇಟ್ಸ್ ವೈರಲ್ ಆಗಿವೆ. ಇದೆಲ್ಲವು ಅರವಿಂದ್ ರೆಡ್ಡಿ ಯಿಂದ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ.
ನಟಿಗೆ 2021ರಲ್ಲೇ ಉದ್ಯಮಿಯ ಪರಿಚಯವಾಗಿತ್ತು ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಉದ್ಯಮಿ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪವಿದೆ. ಈ ಸಂಬಂಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಫೋಟೋಗಳು ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
https://www.newsics.com/2026/01/11/bjp-leader-committed-suicide-by-setting-fire-to-his-car/