Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕೊನೆಯ ಹಂತದಲ್ಲಿ ಇದೆ. ಈಗಾಗಲೇ ಟಿಕೆಟ್ ಫಿನಾಲೆ ರೇಸ್ ಕೂಡ ಆರಂಭವಾಗಿದ್ದು, ಈ ಬಾರಿ ಕಪ್ ಗೆಲ್ಲೋದು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ.ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆ ಒಳಗಿನ ಆಟಗಳು ಇನ್ನಷ್ಟು ಕಠಿಣವಾಗಿದೆ. ಟಿಕೆಟ್ ಟು ಟಾಪ್ 6 ಎಂಬ ಪ್ರಮುಖ ಟಾಸ್ಕ್ ಈ ವಾರ ಸ್ಪರ್ಧಿಗಳ ಧೈರ್ಯ ಮತ್ತು ಶಾರೀರಿಕ ಸಾಮರ್ಥ್ಯಕ್ಕೆ ನಿಜವಾದ ಪರೀಕ್ಷೆಯಾಗಿದೆ.
ಎಲ್ಲರಿಗಿಂತ ಮೊದಲು ಗಿಲ್ಲಿ ನಟ ಅವರೇ ಫಿನಾಲೆ ಪ್ರವೇಶಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಗಿಲ್ಲಿ ನಟ ಅವರಿಗಿಂತಲೂ ಮೊದಲು ಧನುಷ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯನ್ನು ತಲುಪಿದ್ದಾರೆ. ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಕಳೆದ ವಾರ ಧನುಷ್ ಅವರು ಕ್ಯಾಪ್ಟನ್ ಆದರು. ಅವರು ಈ ಸೀಸನ್ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಚಾನ್ಸ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಕೊನೆಯ ಟಾಸ್ಕ್ನಲ್ಲಿ ಜಯಶಾಲಿ ಆಗುವ ಮೂಲಕ ಅವರು ಫಿನಾಲೆ ತಲುಪಿದರು.
ಈ ಟಾಸ್ಕ್ನಲ್ಲಿ ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ಕಾವ್ಯಾ ಶೈವ ಅವರು ಭಾಗಿ ಆಗಿದ್ದರು. ಎಲ್ಲರ ನಡುವೆ ಟಫ್ ಸ್ಪರ್ಧೆ ಏರ್ಪಟ್ಟಿತ್ತು. ಅತಿ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ ಧನುಷ್ ಅವರು ಫಿನಾಲೆಗೆ ಟಿಕೆಟ್ ಪಡೆದರು. ಇನ್ನುಳಿದವರಿಗೆ ಸಹಜವಾಗಿಯೇ ನಿರಾಸೆ ಆಯಿತು. ಧನುಷ್ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ಅವರು ಹೆಚ್ಚು ಖುಷಿಪಟ್ಟರು.
https://www.newsics.com/2026/01/10/baby-dies-of-suffocation-while-breastfeeding/