Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗಂಗಾವತಿ: ಇಲ್ಲೊಬ್ಬ ಪತ್ನಿಯನ್ನೇ ಎತ್ತಿಕೊಂಡು ಅಂಜನಾದ್ರಿ 575 ಮೆಟ್ಟಿಲು ಹತ್ತಿ ಗಮನ ಸೆಳೆದಿದ್ದಾನೆ.ಯಲಬುರ್ಗಾ ಮೂಲದ ಶರಣು ಮೇಟಿ ತನ್ನ ಪತ್ನಿ ಮಂಜುಳಾರನ್ನು ಎತ್ತಿಕೊಂಡು ಅಂಜನಾದ್ರಿ ಬೆಟ್ಟ ಏರಿದವರು.
ಕಡಿದಾದ ರಸ್ತೆ ಮತ್ತು ಮೆಟ್ಟಿಲು ಮಾರ್ಗ ಹೊಂದಿರುವ ತಾಲೂಕಿನ ಅಂಜನಾದ್ರಿಯ ಹನುಮಪ್ಪನ ಬೆಟ್ಟ ಹತ್ತುವುದು ಎಂದರೆ ಸಾಮಾನ್ಯ ಜನರಿಗೆ ಪ್ರಯಾಸವಾಗುತ್ತದೆ. ಅಂಥಹದ್ದರಲ್ಲಿ ಶರಣು ಮೇಟಿ ಪತ್ನಿ ಎತ್ತಿಕೊಂಡು, ಮಾರ್ಗಮಧ್ಯೆ ಎಲ್ಲಿಯೂ ವಿಶ್ರಾಂತಿ ಪಡೆಯದೇ ಬೆಟ್ಟ ಹತ್ತಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಯಾವ ಕಾರಣಕ್ಕೆ ಪತ್ನಿಯನ್ನು ಹೊತ್ತು ಬೆಟ್ಟ ಏರಿದೆ ಎಂಬ ಬಗ್ಗೆ ಶರಣು ಮೇಟಿ ತಿಳಿಸಿಲ್ಲ.