Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗರ್ಭಪಾತಕ್ಕೆ ಪತಿಯ ಅನುಮತಿ ಅಗತ್ಯವಿಲ್ಲ : ಹೈಕೋರ್ಟ್ ತೀರ್ಪು
ದೇಶಪ್ರಮುಖ

ಗರ್ಭಪಾತಕ್ಕೆ ಪತಿಯ ಅನುಮತಿ ಅಗತ್ಯವಿಲ್ಲ : ಹೈಕೋರ್ಟ್ ತೀರ್ಪು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ದೆಹಲಿ: ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಮಹಿಳೆಯೊಬ್ಬರ ಮೇಲೆ ಒತ್ತಡ ಹೇರುವುದು ಆಕೆಯ ದೇಹದ ಮೇಲಿನ ಹಕ್ಕನ್ನು ಉಲ್ಲಂಘಿಸಿದಂತೆ ಮತ್ತು ಮಾನಸಿಕ ಆಘಾತವನ್ನು ಹೆಚ್ಚಿಸಿದಂತೆ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

14 ವಾರದ ಭ್ರೂಣವನ್ನು ವೈದ್ಯಕೀಯವಾಗಿ ತೆಗೆಸಿದ್ದ ಪರಿತ್ಯಕ್ತ ಪತ್ನಿ ವಿರುದ್ಧ ಪತಿಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ (ಅಪರಾಧಿಕ) ಅರ್ಜಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
ವೈವಾಹಿಕ ತಕರಾರು ಪ್ರಕರಣದಲ್ಲಿ ಗರ್ಭಪಾತ ಬಯಸುವುದು ಆಕೆಯ ಸ್ವಾತಂತ್ರ್ಯವಾಗಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ನೀನಾ ಬನ್ಸಾಲ್‌ ಕೃಷ್ಣ ಅವರು, ‘ಅರ್ಜಿದಾರರ ಪತ್ನಿ, ಗರ್ಭಪಾತಕ್ಕೆ ಸಂಬಂಧಿಸಿದ ಐಪಿಸಿಯ 312ನೇ ಸೆಕ್ಷನ್‌ ಅನ್ನು ಉಲ್ಲಂಘಿಸುವ ಉದ್ದೇಶ ಹೊಂದಿಲ್ಲ’ ಎಂದು ಹೇಳಿದ್ದಾರೆ.
‘ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯವಾಗಿದ್ದು, ಗರ್ಭಾವಸ್ಥೆಯ ನಿಯಂತ್ರಣ ಮಹಿಳೆಯ ಅಗತ್ಯ ಮತ್ತು ಹಕ್ಕನ್ನು ಅವಲಂಬಿಸಿದೆ. ಗರ್ಭಪಾತ ನಿರ್ಣಯ ಕಾಯ್ದೆಯಲ್ಲಿ (ಎಂಟಿಪಿ) ಗರ್ಭಪಾತಕ್ಕೆ ಪತಿಯ ಅನುಮತಿ ಕೇಳಬೇಕೆಂದಿಲ್ಲ. ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗುವ ಹಾನಿಯನ್ನೂ ಶಾಸನದ ಜಾರಿ ವೇಳೆ ಪರಿಗಣಿಸಬೇಕಾಗುತ್ತದೆ’ ಎಂದು ಮಂಗಳವಾರ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ.
ಐಪಿಸಿ 312ನೇ ಸೆಕ್ಷನ್‌ ಅಡಿ ಮ್ಯಾಜಿಸ್ಟ್ರಿಯಲ್‌ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಪತಿ ನೀಡಿದ್ದ ಸಮನ್ಸ್ ಅನ್ನು ಪತ್ನಿ ಸೆಷನ್ಸ್ ನ್ಯಾಯಾಲಯದಲ್ಲಿ ಪಶ್ನಿಸಿದ್ದರು. ಸೆಷನ್ಸ್‌ ಕೋರ್ಟ್ ಆಕೆಗೆ ವಿನಾಯಿತಿ ನೀಡಿತ್ತು. ಇದನ್ನು ಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
‘ಗರ್ಭಪಾತದ ದಿನಾಂಕದವರೆಗೂ ನಾವು ಜೊತೆಗಿದ್ದೆವು. ವೈವಾಹಿಕ ವ್ಯಾಜ್ಯ ಇರಲಿಲ್ಲ. ಹೀಗಾಗಿ ಗರ್ಭಾವಸ್ಥೆ ನಿರ್ಣಯ ಕಾಯ್ದೆಯ ನಿಯಮ ಇಲ್ಲಿ ಅನ್ವಯಿಸುವುದಿಲ್ಲ’ ಎಂದು ಪತಿ ವಾದಿಸಿದ್ದರು.
ಆದರೆ ಕೋರ್ಟ್ ಇದನ್ನು ಅಲ್ಲಗಳೆದು, ವೈವಾಹಿಕ ವ್ಯಾಜ್ಯ ಎಂಬುದು ‘ದಂಪತಿ ಪ್ರತ್ಯೇಕವಾದಾಗ ಮತ್ತು ವಿವಾದ ಆದಾಗ ಉಂಟಾಗುತ್ತದೆ ಎಂದರ್ಥವಲ್ಲ. ತುರ್ತು ಮತ್ತು ಇಚ್ಛೆಯಿಲ್ಲದ ಗರ್ಭಾವಸ್ಥೆಯಲ್ಲಿ ಪುರುಷನು ಹೊರೆಯನ್ನು ಹಂಚಿಕೊಳ್ಳಲು ಅಲ್ಲಿ ಇರದಿರಬಹುದು. ಹೀಗಾಗಿ ಮಹಿಳೆ ‘ತನ್ನನ್ನು ತಾನೇ ರಕ್ಷಿಸಿಕೊಳ್ಳುವ’ ಅವಕಾಶ ಹೊಂದಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.
ವೈವಾಹಿಕ ಸ್ಥಿತಿಯಲ್ಲಿ ಬದಲಾವಣೆ ಆದಾಗ (ವಿಧವೆ, ವಿಚ್ಛೇದನ ಮತ್ತಿತರೆ) ಎಂಟಿಪಿ ಕಾಯ್ದೆಯ 3-ಬಿ(ಸಿ) ನಿಯಮದಡಿ ಆಕೆಗೆ ಗರ್ಭಪಾತ ನಿರ್ಣಯದ ಅಧಿಕಾರವಿದೆ ಎಂದು ಕೋರ್ಟ್ ತಿಳಿಸಿದೆ.

ಕಿತ್ತುಕೊಳ್ಳುವುದು ನನ್ನ ಎಕ್ಸ್ ಪೀರಿಯನ್ಸ್ ಅಲ್ಲ; ಡಿಕೆಶಿಗೆ ಕುಮಾರಸ್ವಾಮಿ ಟಾಂಗ್

TAGGED:Husband's permission not required for abortion: High Court rules
Share This Article
Facebook Twitter Copy Link Print
Previous Article ಕಿತ್ತುಕೊಳ್ಳುವುದು ನನ್ನ ಎಕ್ಸ್ ಪೀರಿಯನ್ಸ್ ಅಲ್ಲ; ಡಿಕೆಶಿಗೆ ಕುಮಾರಸ್ವಾಮಿ ಟಾಂಗ್
Next Article TCS ಉದ್ಯೋಗಿಗಳು ಇನ್ಮುಂದೆ ಕಚೇರಿಗೆ ಬಂದು ಕೆಲಸ ಮಾಡದಿದ್ರೆ ಸ್ಯಾಲರಿ ಹೈಕ್ ಇಲ್ಲ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?