Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇತ್ತೀಚೆಗೆ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಭಾಗವಹಿಸಿದ್ದರು. ಈ ವೇಳೆ ಅವರ ಹಣೆಯ ಎಡಭಾಗದಲ್ಲಿದ್ದ ಸಣ್ಣ ಲೋಹದ ಸಾಧನ ಎಲ್ಲರ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇದು ‘ಚೂಯಿಂಗ್ ಗಮ್’ ಅಥವಾ ‘ಚಾರ್ಜಿಂಗ್ ಪಾಯಿಂಟ್’ ಇರಬಹುದು ಎಂದು ಟ್ರೋಲ್‌ಗಳು ನಡೆದ ಬೆನ್ನಲ್ಲೇ, ಗೋಯಲ್ ಇದರ ಹಿಂದಿನ ವೈಜ್ಞಾನಿಕ ಉದ್ದೇಶವನ್ನು ವಿವರಿಸಿದ್ದಾರೆ.
ಈ ಸಾಧನದ ಹೆಸರು ‘ಟೆಂಪಲ್’. ಇದು ಮೆದುಳಿಗೆ ಸಂಬಧಿಸಿದ ಒಂದು ಅತ್ಯಾಧುನಿಕ ಹಾಗೂ ಪ್ರಾಯೋಗಿಕ ತಾಂತ್ರಿಕ ಉಪಕರಣವಾಗಿದೆ.
ಉದ್ದೇಶ: ಮೆದುಳಿಗೆ ರಕ್ತದ ಹರಿವು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ಪತ್ತೆ ಮಾಡುತ್ತದೆ. ಆರೋಗ್ಯಕರ ಮೆದುಳಿಗೆ ರಕ್ತ ಸಂಚಾರ ಸ್ಥಿರವಾಗಿರಲು ಇದು ಸಹಕಾರಿ.
ಪ್ರಾಯೋಗಿಕ ಹಂತ: ಇದು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಗ್ಯಾಜೆಟ್ ಅಥವಾ ಜೊಮಾಟೊದ ಉತ್ಪನ್ನವಲ್ಲ. ಇದೊಂದು ಸಂಶೋಧನೆಯ ಹಂತದಲ್ಲಿರುವ ‘ಮೂಲಮಾದರಿ’ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.
ವರ್ಷಗಳಿಂದ ದೀಪಿಂದರ್ ಗೋಯಲ್ ಅವರು ತಮ್ಮ ದಿನಚರಿಯಲ್ಲಿ ರಕ್ತದ ಗುರುತುಗಳ ಪತ್ತೆಹಚ್ಚುವಿಕೆ, ಉಪವಾಸ ಮತ್ತು ಧ್ಯಾನದಂತಹ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಪರಿಣಾಮಕಾರಿ ಅಭ್ಯಾಸಗಳ ಭಾಗವಾಗಿಯೇ ಈ ‘ಟೆಂಪಲ್’ ಸಾಧನದ ಕಲ್ಪನೆ ಮೂಡಿಬಂದಿದೆ.
ಹಣೆ ಮೇಲೆ ಟೆಂಪಲ್ ಇಟ್ಕೊಂಡು ಓಡಾಡ್ತಿರುವ ಜೊಮಾಟೊ ಸಂಸ್ಥಾಪಕ, ಏನಿದು ಸಾಧನ?