Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ತಂದೆ ತನ್ನ ಬುದ್ಧಿಮಾಂದ್ಯ ಮಗುವಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲ ಎಂದು ವಿಷ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಾಗಲೂರು ನಿವಾಸಿ ಮುನಿಕೃಷ್ಣ ಎಂಬಾತ ಇಂತಹ ಕೃತ್ಯವೆಸಗಿದ ಆರೋಪಿ.
ಸತ್ಯಾ ಮತ್ತು ಮುನಿಕೃಷ್ಣ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಇದೆ. ಮಗು ಜೋಯಲ್ ಗೆ ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳಿಗೆ ಓಡಾಟ ನಡೆಸುತ್ತಿದ್ದರು. ಮಗುವಿಗೆ ಆಹಾರ ನೀಡಲು ಹಾಕಿದ್ದ ಪೈಪ್ ಗೆ ಮುನಿಕೃಷ್ಣ ವಿಷ ಹಾಕಿದ್ದ. ಮಗುವಿನ ಬಾಯಲ್ಲಿ ನೊರೆ ಕಂಡು ತಾಯಿ, ಅಜ್ಜಿ ಗಾಬರಿಯಾಗಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಮುನಿಕೃಷ್ಣ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ.
https://www.newsics.com/2026/01/04/young-men-danced-half-naked-on-top-of-a-car/