Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನೋಯ್ಡಾ: ಯುವಕರು ಶರ್ಟ್ ಬಿಚ್ಚಿ ಕಾರಿನ ಮೇಲೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊಸ ವರ್ಷದ ಸಂಭ್ರಮಾಚಾರಣೆ ನಶೆಯಲ್ಲಿ ಯುವಕರ ಗುಂಪುವೊಂದು ರಸ್ತೆಯಲ್ಲಿ ಕಾರಿನ ಮೇಲೆ ಅರೆಬೆತ್ತಲೆಯಾಗಿ ಡಾನ್ಸ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೂ ಮುಜುಗರ ಉಂಟು ಮಾಡಿದ್ದಾರೆ.
ನೋಯ್ಡಾ ಸಂಚಾರ ಪೊಲೀಸರು 67,000 ರೂ.ಗಳ ಇ-ಚಲನ್ ಜಾರಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಗುಂಪು ಸಂಚಾರಕ್ಕೆ ಅಡ್ಡಿಪಡಿಸಿತ್ತು ಮತ್ತು ಕಾರಿನ ಇತರ ಪ್ರಯಾಣಿಕರು ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದರಿಂದ ಅವರ ವರ್ತನೆಗಳು ಭಾರಿ ಅಡಚಣೆಯನ್ನುಂಟುಮಾಡಿದ್ದವು.